ಬಾಗಲಕೋಟೆ:ಕಾಲೇಜು ಕಟ್ಟಡದ ಒಳಗಡೆ ಪ್ರಾಂಶುಪಾಲರೊಬ್ಬರು ಸಾವಿಗೆ ಶರಣಾಗಿರುವ ಘಟನೆ ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ನಾಗರಾಜ್ ಮುದಗಲ್ಲ (55) ಮೃತ ಪ್ರಾಂಶುಪಾಲ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಇಂದು ನಸುಕಿನ ವೇಳೆ ನೇಣು ಹಾಕಿಕೊಂಡಿದ್ದಾರೆ. ಕಾಲೇಜ್ ಕ್ಯಾಂಟಿನ್​ ಸ್ಟೇರ್ ಕೇಸ್ ಗ್ರಿಲ್​​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಇಂದು ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಪೂರ್ವ ಸಿದ್ದತೆಗಾಗಿ ನಿನ್ನೆ ರಾತ್ರಿ ಕಾಲೇಜಿನಲ್ಲೆ ಪ್ರಾಂಶುಪಾಲರು ವಾಸ್ತವ್ಯ ಹೂಡಿದ್ದರು. ನಸುಕಿನ ಜಾವ ಎದ್ದು ನಿತ್ಯಕರ್ ಮುಗಿಸಿ ರೆಡಿಯಾಗಲೆಂದು ಕೊಠಡಿಯಿಂದ ಹೊರಗೆ ಬಂದ ಪ್ರಾಂಶುಪಾಲರು ಬಳಿಕ‌ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ಬಾಲ್ಯ ವಿವಾಹಕ್ಕೆ ಲವ್ ಬ್ರೇಕ್!; ಸ್ನೇಹಿತರಿಂದಲೇ ಮಾಹಿತಿ, 4 ವರ್ಷದಲ್ಲಿ 8,929 ಲಗ್ನಕ್ಕೆ ತಡೆ
ಆರು ತಿಂಗಳ ಹಿಂದೆ ಇಳಕಲ್ ಕಾಲೇಜ್​​ನಿಂದ ಹುನಗುಂದ ಕಾಲೇಜ್​ಗೆ ವರ್ಗಾವಣೆ ಆಗಿ ಬಂದಿದ್ದರು. ಇಳಕಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಇವರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ.
ಘಟನಾ ಸ್ಥಳಕ್ಕೆ ಹುನಗುಂದ ಡಿವೈಎಸ್ಪಿ, ಸಿಪಿಐ, ಪಿಎಸ್​ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುನುಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ರಕ್ತನಾಳಗಳ ಬ್ಲಾಕೇಜ್​ಗೆ ಕಾರಣವಾಗುವ ಆಹಾರಗಳಿವು! ಸೇವಿಸುವುದನ್ನು ಈಗಲೇ ಅವಾಯ್ಡ್​ ಮಾಡಿ…

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಇಂದು ರೈತ ಸಂಘದಿಂದ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್

ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nine =
Remember me
