ಮೈಸೂರು:ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹುಣಸೂರು ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಚ್.ಪಿ. ಮಂಜುನಾಥ್ ವಾಗ್ದಾಳಿ ನಡೆಸಿದ್ದು, ಮಹಾರಾಣಿಯಾಗಿ ಮೆರೆಯಬೇಡಿ ಎಂದಿದ್ದಾರೆ.
ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ವಿರುದ್ಧ ಮಂಜುನಾಥ್ ಹರಿಹಾಯ್ದರು. ಮೈಸೂರಿಗೆ ಇಬ್ಬರು ಮಹಾರಾಣಿ (ಪ್ರಮೋದಾದೇವಿ, ತ್ರಿಶಿಕಾ) ಇದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಇಲ್ಲ. ಮಹಾರಾಣಿಯಾಗಿ ಮೆರೆಯಬೇಡಿ. ಅಧಿಕಾರಿಯಾಗಿ ವರ್ತಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.
ಇದನ್ನೂ ಓದಿ:ಜನವರಿ ಮೂರನೇ ವಾರದಿಂದ ಕನ್ನಡದ ಬಿಗ್​ಬಾಸ್​ ಶುರು; ಈ ಸಲದ ವಿಶೇಷತೆ ಏನು ಗೊತ್ತಾ?
ನಾನು ಬರೆದ ಒಂದು ಪತ್ರಕ್ಕೂ ಡಿಸಿ ಉತ್ತರ ನೀಡುತ್ತಿಲ್ಲ. ಹುಣಸೂರು ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನ ಸೆಳೆದರೂ ಡಿಸಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಡಹಬ್ಬದ ಗಜಪಯಣ ಸಂದರ್ಭ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನ ನೀಡಲಿಲ್ಲ. ಗಜಪಯಣಕ್ಕೆ ನನ್ನನ್ನು ಆಹ್ವಾನಿಸಲಿಲ್ಲ‌. ನೀವೇ ಗಂಧದ ಕಡ್ಡಿ ಬೆಳಗಿದಿರಿ. ಆ ಕೆಲಸ ನಾವು ಮಾಡುತ್ತಿರಲಿಲ್ಲವೇ? ನಿಮಗೆ ಅಷ್ಟೊಂದು ಪ್ರಚಾರದ ಆಸಕ್ತಿ ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿ ಎಂದರು.
ಕಾಂಗ್ರೆಸ್ ಸರ್ಕಾರ ಕೆಡವಿದ್ದಕ್ಕೆ ಜಿಲ್ಲೆಯ ಉಡುಗೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
