ಬೈಲಹೊಂಗಲ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದೆ.
ಗುರುನಾಥ ನಾರಾಯಣ ತಾವರೆ (46), ಮೀನಾಕ್ಷಿ ಗುರುನಾಥ ತಾವರೆ (33) ಆತ್ಮಹತ್ಯೆ ಮಾಡಿಕೊಂಡವರು. ಪಟ್ಟಣದ ಚನ್ನಮ್ಮ ಬಡಾವಣೆಯ 1ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಶಿಕ್ಷಕ ಗುರುನಾಥ ತಾವರೆ ಮೂಲತಃ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಆರು ತಿಂಗಳ ಹಿಂದೆ ತಾಲೂಕಿನ ಅಮಟೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದನ್ನೂ ಓದಿ:ಠಾಣೆಯ ಆವರಣದಲ್ಲೇ ಪೊಲೀಸರಿಂದ ಇಸ್ಪೀಟ್ ಜೂಜಾಟ!
ಬೆಳಗಾವಿ ನಗರದ ಮೀನಾಕ್ಷಿ ಜತೆ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ, ಪತ್ನಿಯರಿಬ್ಬರ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು. ಈ ಹಿಂದೆಯೂ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಸೂಚನೆಯಂತೆ ಪರಸ್ಪರ ಹೊಂದಾಣಿಕೆ ಜೀವನ ಸಾಗಿಸುವುದಾಗಿ ಒಪ್ಪಿಕೊಂಡಿದ್ದರು. ಪದೇ ಪದೆ ಪರಸ್ಪರ ಇಬ್ಬರು ಮುನಿಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಸಂಬಂಧಿಕರು, ಹಿರಿಯರು ತಿಳಿ ಹೇಳಿದರೂ ವೈಮನಸ್ಸು ಕಡಿಮೆಯಾಗಿರಲಿಲ್ಲ. ದಂಪತಿಗೆ ಹತ್ತು ವರ್ಷದ ಮಗ, ಮೂರು ವರ್ಷದ ಮಗು ಇದೆ.ಇದನ್ನೂ ಓದಿ:ಪ್ರಿಯಾಂಕಾ ನಾಯಕತ್ವ, ದೇವೇಗೌಡರ ರಾಜಕೀಯ ಭವಿಷ್ಯ ಕುರಿತು ವಿಶ್ವನಾಥ್ ಚಿಂತೆ!
ಅನ್ಯ ಜಾತಿಯವನೊಂದಿಗೆ ಸರಸ-ಸಲ್ಲಾಪ ನಡೆಸಿ ಬಸಿರಾದ ಮಗಳನ್ನು ತಂದೆ-ತಾಯಿಯೇ ಕೊಂದುಬಿಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
