ಬೀದರ್:ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿ ಶಾಕ್​ಗೆ ಒಳಗಾದಾಗ ಆಕೆಯನ್ನು ರಕ್ಷಿಸಲು ಪತಿ ಧಾವಿಸಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾದ ದುರಂತವೊಂದು ಸಂಭವಿಸಿದೆ. ಬೀದರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಮನ್ಮಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಶಿವಾರೆ ಹಾಗೂ ಅವರ ಪತ್ನಿ ಶರಣಮ್ಮ ಸಾವಿಗೀಡಾದವರು. ಮನ್ನಳ್ಳಿ- ಚಿಂತಲಗಿ ಮಧ್ಯೆ ರಸ್ತೆ ಪಕ್ಕ ವಿದ್ಯುತ್ ತಂತಿ ಕಡಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಕಂಬದಲ್ಲಿ ತುಂಡಾದ ತಂತಿ ನೀರಲ್ಲಿ ಬಿದ್ದಿರುವುದು ಶರಣಮ್ಮ ಅವರಿಗೆ ತಿಳಿದಿರಲಿಲ್ಲ. ಅವರು ಎಮ್ಮೆಗೆ ನೀರು ಕುಡಿಸಲು ಹೋಗಿದ್ದಾಗ ವಿದ್ಯುತ್ ಶಾಕ್​ಗೆ ಒಳಗಾಗಿದ್ದಾರೆ. ಅಲ್ಲೇ ಇದ್ದ ಪತಿ ಮಲ್ಲಿಕಾರ್ಜುನ ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಇಬ್ಬರೂ ವಿದ್ಯುತ್​ ಸ್ಪರ್ಶಕ್ಕೀಡಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮನ್ನಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು; ವಾಹನ ಚಲಾಯಿಸುತ್ತಿದ್ದ ಚಿತ್ರನಟ ನಾಗಭೂಷಣ್ ಮದ್ಯಪಾನ ಮಾಡಿದ್ದರಾ?

ಲಕ್ಷುರಿ ಕಾರಲ್ಲಿ ಬಂದು ಸೊಪ್ಪು ಮಾರಿದ ರೈತ!; ಮಾರ್ಕೆಟ್​ಗೆ ಬರ್ತಿದ್ದಂತೆ ಪಂಚೆ ಬಿಚ್ಚಿ ವ್ಯಾಪಾರಕ್ಕಿಳಿದ ವಿಡಿಯೋ ವೈರಲ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − six =
Remember me
