ಕೊಡಗು:ಇವರಿಬ್ಬರು ಮದುವೆಯಾಗಿ ಬರೀ ಹತ್ತು ತಿಂಗಳುಗಳಷ್ಟೇ ಆಗಿದ್ದವು. ಆದರೆ ಅಷ್ಟರಲ್ಲಾಗಲೇ ದುರಂತ ಸಂಭವಿಸಿದ್ದು, ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಮೂಲದ ಯುವರಾಜ್ ದಂಪತಿ, ಹತ್ತು ತಿಂಗಳ ಹಿಂದೆ ಶಿಲ್ಪಾಳನ್ನು ಮದುವೆಯಾಗಿದ್ದರು. ಆ ಬಳಿಕ ಇಬ್ಬರೂ ಪೊನ್ನಂಪೇಟೆಯ ಬಿರುನಾಣಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ಇದನ್ನೂ ಓದಿ:ತಂಗಿಯ ಸಂಸಾರ ಸರಿಪಡಿಸಲು ಹೋದವ ಆಕೆಯ ಗಂಡನಿಂದಲೇ ಕೊಲೆಗೀಡಾದ!
ಫಾರೆಸ್ಟ್​ ಗಾರ್ಡ್​ ಆಗಿರುವ ಯುವರಾಜ್ ಇಂದು ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಹೆಂಡತಿ ಜೀವಂತ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಶವ ನೋಡಿದ ಯುವರಾಜ್, ಆಕೆಯ ಕಳೇಬರವನ್ನು ಕೆಳಗಿಳಿಸಿ​ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ರೋಚಕ ರಕ್ಷಣಾ ಕಾರ್ಯಾಚರಣೆ; ಟ್ರೆಕ್ಕಿಂಗ್ ವೇಳೆ ಕಂದಕಕ್ಕೆ ಬಿದ್ದವನ ರಕ್ಷಣೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 3 =
Remember me
