ತೆಲಂಗಾಣ:ವಿಷಪೂರಿತ ಹಾಲು ಕುಡಿದು ಇಬ್ಬರು ಮುದ್ದಾದ ಸಹೋದರಿಯರು ಲೋಹಿತಾ(3) ಮತ್ತು ಜಸ್ವಿತಾ(1) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಅಂಕಣ್ಣಗುಡೆಂ ಗ್ರಾಮದಲ್ಲಿ ನಡೆದಿದೆ. ಮಕ್ಕಳನ್ನು ಬಿಟ್ಟು ಪೋಷಕರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಜೊತೆಗಿನ ಮೈತ್ರಿ ಸರ್ಕಾರ ರಚಿಸಿದ್ದೇ ದೊಡ್ಡ ತಪ್ಪು: ಸರಿ ಮಾಡಿಕೊಳ್ಳುವ ಕಾಲ ಸನ್ನಿಹಿತ!
ಕೃಷಿಕರಾಗಿರುವ ಅನಿಲ್ ಕುಟುಂಬ ಸಮೇತ ರಾಯಕುಂಟಾದಲ್ಲಿ ವಾಸವಾಗಿದ್ದಾರೆ. ಶನಿವಾರ ಸಂಜೆ ಪತ್ನಿ ಮಕ್ಕಳೊಂದಿಗೆ ಅಂಕಣ್ಣಗೂಡಿಗೆ ಬಂದಿದ್ದರು. ಅನಿಲ್ ತಂದೆ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ವೆಂಕಣ್ಣ ಭಾನುವಾರ ಬೆಳಗ್ಗೆಯೇ ಅಂಗಡಿಗೆ ತೆರಳಿ 9.30ಕ್ಕೆ ಮನೆಗೆ ಬಂದ ವೇಳೆ ಮಗ ಮತ್ತು ಸೊಸೆ ಮನೆಯಲ್ಲಿ ಇರಲಿಲ್ಲ. ಆದರೆ ಇಬ್ಬರು ಮೊಮ್ಮಕ್ಕಳು ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು.

ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಮಹಬೂಬಾಬಾದ್ ಡಿಎಸ್ಪಿ ತಿರುಪತಿ ರಾವ್, ಸಿಐ ರವಿಕುಮಾರ್, ಎಸ್‌ಸಿ ಜೀನತ್ ಕುಮಾರ್ ಪರಿಶೀಲನೆ ನಡೆಸಿದರು. ವೆಂಕಣ್ಣನನ್ನು ವಿಚಾರಣೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಮಕ್ಕಳು ಸಾವನ್ನಪ್ಪಿದ ಹಾಸಿಗೆಯ ಮೇಲೆ ಹಾಲಿನ ಬಾಟಲಿ, ರೂಂನಲ್ಲಿ ಹರಿದ ಹಾಲಿನ ಪ್ಯಾಕೆಟ್, ಬಟ್ಟೆ ಚೀಲದಲ್ಲಿ ಕೀಟನಾಶಕ ಡಬ್ಬಿ ಇತ್ತು. ಹಾಲಿನಲ್ಲಿ ಬೆರಸಿರುವ ವಿಷ ಕುಡಿದ್ದರಿಂದ ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಮೊಮ್ಮಕ್ಕಳನ್ನು ನನ್ನ ಮಗ ಮತ್ತು ಸೊಸೆ ಹಾಲಿನಲ್ಲಿ ವಿಷ ಬೆರಸಿ ಸಾಯಿಸಿದ್ದಾರೆ ಎಂದು ಆರೋಪಿ ಮೃತರ ಅಜ್ಜ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಕ್ಕಳ ಶವದ ಪಕ್ಕದಲ್ಲಿದ್ದ ಬಾಟಲಿಯಲ್ಲಿದ್ದ ಹಾಲಿನಲ್ಲಿ ವಿಷ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಕ್ಕಳ ಅಂತ್ಯಕ್ರಿಯೆಗಾಗಿ ಸಂಜೆ ಆದರೂ ಆಗಮಿಸದ ಪೋಷಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
IPL ಆರಂಭಕ್ಕೂ ಅಂಬಾಟಿ ರಾಯಡು ಮಹತ್ವದ ಹೇಳಿಕೆ..! ಸಿಎಸ್​ಕೆಗೆ ರೋಹಿತ್ ಶರ್ಮ ಕ್ಯಾಪ್ಟನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
