ಧಾರವಾಡ:ಒಬ್ಬಳು ಹೆಂಡತಿ ಇರುವಾಗಲೇ ಇನ್ನೊಬ್ಬಳನನ್ನು ಮದವೆಯಾಗಲು ಹೊರಟವನನ್ನು ಮೊದಲ ಪತ್ನಿಯು ಸ್ಥಳಕ್ಕೇ ತೆರಳಿ ತಡೆದಿದ್ದಾಳೆ. ಆ ಮೂಲಕ ಒಬ್ಬಳಿಗೆ ಕೈಕೊಟ್ಟು ಇನ್ನೊಬ್ಬಳ ಕೈಹಿಡಿಯಲು ಹೋದವನಿಗೆ ಎರಡನೇ ಮದುವೆ ಅವಕಾಶ ಸದ್ಯಕ್ಕೆ ಕೈತಪ್ಪಿಹೋಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರ ಮೂಲದ ಡ್ಯಾನಿಷ್​ ಎರಡನೇ ಮದುವೆಯಾಗಲು ಮುಂದಾದ ವ್ಯಕ್ತಿ. ಈತನಿಗೆ ರಾಜಬಿ ಮನಿಯಾರ್ ಎಂಬಾಕೆಯ ಜತೆಗೆ ಈಗಾಗಲೇ ಮದುವೆಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಮದುವೆ ಆಗಿರುವ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಡ್ಯಾನಿಷ್ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ.
ಇದನ್ನೂ ಓದಿ:ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ದರ್ಗಾದಲ್ಲಿ ಇಂದು ಡ್ಯಾನಿಷ್​​ನ ಎರಡನೇ ವಿವಾಹಕ್ಕೆ ಏರ್ಪಾಟು ಮಾಡಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಮೊದಲನೇ ಪತ್ನಿ ರಾಜಬಿ, ದರ್ಗಾಗೇ ತೆರಳಿ ರಂಪ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಕೊನೆಗೂ ಡ್ಯಾನಿಷ್​ನ ಎರಡನೇ ಮದುವೆಯನ್ನು ನಿಲ್ಲಿಸುವಲ್ಲಿ ಮೊದಲ ಪತ್ನಿ ಯಶಸ್ವಿಯಾಗಿದ್ದಾಳೆ.
ಈ ದಂಪತಿ ಧಾರವಾಡದಲ್ಲಿ ವಾಸವಿದ್ದು, ರಾಜಬಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಡ್ಯಾನಿಷ್ ಸದ್ಯ ಎಲ್ಲಿಯೂ ಕೆಲಸ ಮಾಡುತ್ತಿಲ್ಲ ಎಂಬುದು ಪತ್ನಿ ರಾಜಬಿಯ ಆರೋಪ. ಆದರೆ ಅದನ್ನು ಅಲ್ಲಗಳೆಯುವ ಡ್ಯಾನಿಷ್​, ಆಕೆಗೆ ಬೇರೊಬ್ಬನ ಜತೆ ಸಂಬಂಧವಿದೆ. ಕೆಲಸಕ್ಕೆ ಹೋಗುವುದಾಗಿ ಹೇಳಿ ಅವನೊಂದಿಗೆ ಹೊರಗಡೆ ಸುತ್ತಾಡುತ್ತಿದ್ದಾಳೆ. ಜಮಾತ್​ನಲ್ಲಿ ಡೈವೋರ್ಸ್ ಮಾಡಿಸಲು ಕರೆಸಿದ್ದರೂ ಸರಿಯಾಗಿ ಸ್ಪಂದಿಸಿಲ್ಲ. ಕೋರ್ಟ್ ನೋಟಿಸ್ ಕೂಡ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಆಕೆಯೊಂದಿಗೆ ಬದುಕಲು ಇಷ್ಟ ಇಲ್ಲದ್ದರಿಂದ ಮತ್ತೊಂದು ಮದುವೆಗೆ ಮುಂದಾಗಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾನೆ. ಒಟ್ಟಿನಲ್ಲಿ ಸದ್ಯಕ್ಕಂತೂ ಎರಡನೇ ಮದುವೆ ನಿಂತುಹೋಗಿದೆ.
ಇದನ್ನೂ ಓದಿ:ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
1ರಿಂದ 9ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ ಕೊಡಲಿದೆ ಸರ್ಕಾರ- ಎಲ್ಲರೂ ಪಾಸ್​ ಪಾಸ್​….

ಕಾಪು: ವಾಲಿಬಾಲ್ ಆಡುತ್ತಿದ್ದಾಗಲೇ ಕುಸಿದುಬಿದ್ದು ಯುವಕ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 7 =
Remember me
