ಮಂಡ್ಯ:ಯೂಟ್ಯೂಬ್​ ಶಾರ್ಟ್ಸ್​ ಮತ್ತು ಇನ್​ಸ್ಟಾಗ್ರಾಂ ರೀಲ್ಸ್​ ಇಂದು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿಭೆಗೆ ಒಂದು ಉತ್ತಮ ವೇದಿಕೆಯಾದರೂ ಕೂಡ ಕೆಲವೊಮ್ಮೆ ಇದೇ ರೀಲ್ಸ್​ ಮತ್ತು ಶಾರ್ಟ್ಸ್​ ಪ್ರಾಣಕ್ಕೂ ಸಂಚಕಾರ ತರುತ್ತಿದೆ. ಇತ್ತೀಚೆಗೆ ಭಾರೀ ಮಳೆಯ ಸಂದರ್ಭದಲ್ಲಿ ರೀಲ್ಸ್​ ಮಾಡಲು ಹೋಗಿ ಉಡುಪಿಯ ಯುವಕನೊಬ್ಬ ಜಲಪಾತದ ಪಾಲಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಇದೇ ರೀಲ್ಸ್​ ಯುವತಿಯೊಬ್ಬಳ ಪ್ರಾಣವನ್ನು ತೆಗೆದಿದೆ.
ಹೌದು, ರೀಲ್ಸ್​ ಮೇಲಿನ ವ್ಯಾಮೋಹ, ಯುವತಿಯ ಬಾಳಿಗೆ ಕೊಳ್ಳಿ ಇಟ್ಟಿದೆ. ರೀಲ್ಸ್​ನಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಯುವತಿ ತನ್ನ ಗಂಡನಿಂದಲೇ ಬರ್ಬರ ಹತ್ಯೆಯಾಗಿದ್ದಾಳೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಪೂಜಾ (26) ಎಂದು ಗುರುತಿಸಲಾಗಿದೆ. ತನ್ನ ಪತಿ ಶ್ರೀನಾಥ್​ (36)ನಿಂದ ಹತ್ಯೆಯಾಗಿದ್ದಾಳೆ.
ಇದನ್ನೂ ಓದಿ:ರೀಲ್ಸ್ ಮಾಡಲು ಬೈಕ್‌ನಲ್ಲಿ ಹುಚ್ಚಾಟ ತೋರಿದ ಯೂಟ್ಯೂಬರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಪೂಜಾ ಯಾವಾಗಲೂ ರೀಲ್ಸ್​ನಲ್ಲಿ ಬಿಜಿಯಾಗಿರುತ್ತಿದ್ದಳು. ಇಷ್ಟೇ ಅಲ್ಲದೆ, ಸ್ನೇಹಿತರೊಂದಿಗೂ ಚಾಟಿಂಗ್​ ಮಾಡುತ್ತಿದ್ದಳು. ಯಾವಾಗಲೂ ಮೊಬೈಲ್​ನಲ್ಲಿ ಮುಳುಗಿರುತ್ತಿದ್ದ ಪೂಜಾಳನ್ನು ನೋಡಿ ಗಂಡನಿಗೆ ಸಂಶಯ ಶುರುವಾಗಿತ್ತು. ಪರಪುರುಷನೊಂದಿಗೆ ತನ್ನ ಪತ್ನಿಗೆ ಅನೈತಿಕ ಸಂಬಂಧ ಇರಬಹುದೆಂಬ ಅನುಮಾನ ಬಲವಾಯಿತು. ಇದೇ ಅನುಮಾನ ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ. ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ 3 ದಿನ ಬಳಿಕ 102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಪೂಜಾ ಹಾಗೂ ಶ್ರೀನಾಥ್, 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿಯೇ ಬದುಕುತ್ತಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಸಹ ಇದೆ. ಆದರೆ, ಕೆಲವು ವರ್ಷಗಳಿಂದ ಪೂಜಾಗೆ ರೀಲ್ಸ್​ ಮತ್ತು ಶಾರ್ಟ್ಸ್​ ಮೇಲಿನ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಳು. ರೀಲ್ಸ್ ಮಾಡುವ ಜೊತೆಗೆ ಹೆಚ್ಚೆಚ್ಚು ಫೋನ್ ಬಳಸುತ್ತಿದ್ದಳು. ಅತಿಯಾದ ಫೋನ್ ಬಳಕೆಯಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪರಪುರುಷರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತ ಅನುಮಾನ ವ್ಯಕ್ತಪಡಿಸಿ ಶ್ರೀನಾಥ್ ಜಗಳ ಆಡುತ್ತಿದ್ದ. ಇದೇ ಜಗಳ ಮೂರು ದಿನಗಳ ಹಿಂದೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಶ್ರೀನಾಥ್​, ವೇಲ್​ನಿಂದ ಪೂಜಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಶವ ಸಾಗಿಸಲು ಮಾವನೇ ಅಳಿಯನಿಗೆ ಸಾಥ್ ನೀಡಿದ್ದಾರೆ. ಅಳಿಯನೊಂದಿಗೆ ಸೇರಿ ತನ್ನ ಮಗಳ ಶವವನ್ನು ಕಾವೇರಿ ನದಿಗೆ ಎಸೆದು ಬಂದಿದ್ದರು. ಇದಕ್ಕು ಮುನ್ನ ಕೊಲೆಗೈದ ಬಳಿಕ ಶ್ರೀನಾಥ್​, ತನ್ನ ಮಾವ ಶೇಖರ್​ಗೆ ಕರೆ ಮಾಡಿ, ಕೊಲೆ ಮಾಡಿರುವುದನ್ನು ತಿಳಿಸಿದ್ದ. ಮಗಳ ಕೊಲೆ ಬಗ್ಗೆ ತಿಳಿದರೂ ಅದನ್ನು ಪೊಲೀಸರಿಗೆ ಹೇಳದೆ ಅಳಿಯನಿಗೆ ಶೇಖರ್​ ಸಾಥ್ ನೀಡಿದ್ದಾರೆ. ಮನೆಯಿಂದ ಬೈಕ್ ನಲ್ಲಿ ಶವ ಸಾಗಿಸಿ, ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದು ಬಂದಿದ್ದಾರೆ.
ಇದನ್ನೂ ಓದಿ:ಮಕ್ಕಳಿಬ್ಬರ ಮನವೊಲಿಸಿ ಒಟ್ಟಿಗೆ ಸಾವಿನ ಹಾದಿ ಹಿಡಿದ ತಾಯಿ: ಬಿಟ್ಟು ಬಿಡದೆ ಕಾಡಿದ ನೋವಿಗೆ ಕಣ್ಮರೆಯಾದ ಕುಟುಂಬ

ಕಳೆದ ಸೋಮವಾರ ಈ ಕೊಲೆ ನಡೆದಿದೆ. ಹತ್ಯೆಯ ಬಳಿಕವೂ ಮನೆಯಲ್ಲೇ ಇದ್ದ ಶ್ರೀನಾಥ್, ಮೂರು ದಿನಗಳ ಬಳಿಕ ನಿಮಿಷಾಂಭ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದ. ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅತ್ತ ಮಗಳ ಶವವನ್ನು ನದಿಗೆಸೆದು ಬಂದಿದ್ದ ಶೇಖರ್​, ಹೋಟೆಲ್ ಕೆಲಸದಲ್ಲಿ ತೊಡಗಿದ್ದ. ಇದೀಗ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಅರಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಸೈಬರ್ ನೀತಿಗೆ ಅಸ್ತು; ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಜಾಗೃತಿ ಕಾರ್ಯಕ್ರಮ

ಸಂಸತ್ ವಿಸರ್ಜನೆ ಪಾಕ್​ನಲ್ಲಿ ಬೆಳವಣಿಗೆ; ಚುನಾವಣೆ ಮುಂದೂಡಲು ಚಿಂತನೆ

ಮಣಿಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಬೆಳಕಿಗೆ; ಗಲಭೆ ಸ್ಪೋಟದ ಮೊದಲ ದಿನವೇ ಕುಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eighteen =
Remember me
