ಹಾವೇರಿ:ಕರೊನಾ ಪಾಸಿಟಿವ್ ವರದಿ ಬಂದ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ತೆರಳಿದಾಗ ಪತ್ನಿಯೊಂದಿಗೆ ಪತಿಯೂ ಆಂಬುಲೆನ್ಸ್ ಏರಲು ಯತ್ನಿಸಿ, ರಂಪಾಟ ಮಾಡಿದ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣದ ಹಿನ್ನೆಲೆಯಲ್ಲಿ ತಾಲೂಕಿನ ಕನವಳ್ಳಿ ಗ್ರಾಮದ ಗರ್ಭಿಣಿಯೊಬ್ಬರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಗುರುವಾರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ ಆಂಬುಲೆನ್ಸ್ ಜತೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕರೊನಾ ಸೋಂಕಿತೆಯ ಪತಿ ಕೂಡ ಆಂಬುಲೆನ್ಸ್ ಏರಲು ಯತ್ನಿಸಿದ್ದಾನೆ. ಸಿಬ್ಬಂದಿ ಎಷ್ಟೇ ವಿನಂತಿಸಿದರೂ ಕೇಳದೇ ವಾಹನ ಏರಲು ಮುಂದಾಗಿದ್ದಾನೆ.ಇದನ್ನೂ ಓದಿರಿಒಂದೇ ಗುಂಡಿಗೆ 9 ಶವ ಎಸೆದು ಅಂತ್ಯಸಂಸ್ಕಾರ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ!
ಆಗ ಗ್ರಾಮಸ್ಥರು ಮನವೊಲಿಸಿ ಪತ್ನಿಯನ್ನು ಮಾತ್ರ ಆಸ್ಪತ್ರೆಗೆ ಕಳಿಸಿದ್ದಾರೆ. ಆಂಬುಲೆನ್ಸ್ ಮುಂದೆ ಹೋಗುತ್ತಿದ್ದಂತೆ ಬೈಕ್‌ನಲ್ಲಿ ಹಿಂಬಾಲಿಸಿ ಆಸ್ಪತ್ರೆಯವರೆಗೂ ಹೋಗಿದ್ದಾನೆ. ಕೋವಿಡ್ ಆಸ್ಪತ್ರೆಗೆ ಸೋಂಕಿತೆಯನ್ನು ದಾಖಲಿಸಿದ ನಂತರವೂ ಒಳಗಡೆ ಹೋಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಬೆದರಿಸಿ ಕಳಿಸಿದ್ದಾರೆ. ನಂತರ ಈತನನ್ನು ಹಾವೇರಿ ಹೊರವಲಯದಲ್ಲಿರುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿದೆ. ಗರ್ಭಿಣಿಯ ಪ್ರಾಥಮಿಕ ಸಂಪರ್ಕಿತ ಪತಿ ಸೇರಿ 26 ಜನರನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಪಟ್ಟಾಭಿಷೇಕದಲ್ಲಿ ಡಿಕೆಶಿ ಮನದಾಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 2 =
Remember me
