ಕುಂದಾಪುರ:ಪತ್ನಿ ನೆನಪಿಗಾಗಿ ಪತಿಯ ಪ್ರೀತಿ, ತ್ಯಾಗ ರಾಮಾಯಣ ಮಹಾಭಾರತ ಕಾಲದಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಯುಗದವರಿಗೂ ಸಾಗಿಬಂದಿದೆ. ಪತ್ನಿ ನೆನಪಿಗಾಗಿ ಮನೆಯಲ್ಲೇ ಪತ್ನಿಯ ಮೇಣದ ಪ್ರತಿಕೃತಿ ಇಟ್ಟುಕೊಂಡವರೂ ಇದ್ದಾರೆ. ಇಲ್ಲೊಬ್ಬರು ದಾಂಪತ್ಯ ಜೀವನದ ಬೆಳ್ಳಿಹಬ್ಬ ಪತ್ನಿ ಬಯಕೆಯಂತೆ ನಡೆಸಿ, ಮಾದರಿ ಪತಿ ಪಟ್ಟಿಗೆ ಸೇರಿದ್ದಾರೆ.
ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನ ಬುಧವಾರ ಇಂತಹದ್ದೊಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಅಗಲಿದ ಪತ್ನಿ ಬಯಕೆಯಂತೆ ದಾಂಪತ್ಯ ಜೀವನದ 25ರ ಸಂಭ್ರಮ ಪತ್ನಿ ಛಾಯಾಪ್ರತಿಕೃತಿ ಜತೆ ಆಚರಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪಂಚಮಸಾಲಿ ಮೀಸಲಾತಿ ಹೋರಾಟ; ಡಿ. 05ರಂದು ಸರ್ವಪಕ್ಷ ಶಾಸಕರ ಸಭೆ: ಕೂಡಲಸಂಗಮ ಶ್ರೀ
ಕುಂದಾಪುರ ಸಪ್ತಗಿರಿ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಸಂಪ್ರದಾಯಕ್ಕೆ ಮುನ್ನುಡಿ ಬರೆದವರು. ಮಹೋತ್ಸವದ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಅವರ ಸಲಹೆಯನ್ನು ಪತಿ ಪಾಲಿಸಿದ್ದಾರೆ. ಪತ್ನಿ ಸುಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಚಂದ್ರಶೇಖರ್ ಪತ್ನಿ ಅಭಿಲಾಷೆ ಈಡೇರಿಸಿ ಮಾದರಿ ಪತಿಯಾಗಿದ್ದಾರೆ.
ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ಸಭಾಂಗಣ ಮಂಟಪದಲ್ಲಿ ಪತ್ನಿಯಷ್ಟೇ ಆಳೆತ್ತರದ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸುಮಾ ಛಾಯಾಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿತ್ತು. ಭಾಗವಹಿಸಿ ಹಾರೈಸಿದವರ ಕಣ್ಣಂಚಿನಲ್ಲಿ ನೀರಿದ್ದರೂ ಪತಿಯ ಬದ್ಧತೆಗೊಂದು ಮೆಚ್ಚುಗೆಯೂ ಇತ್ತು ಎನ್ನೋದು ವಿಶೇಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
