ಬೆಂಗಳೂರು:ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಗಂಡನೇ ಬರ್ಬರವಾಗಿ ಕೊಚ್ಚಿಹಾಕಿದ್ದ. ಆ ವೇಳೆ ಆತನ ಗಂಟಲು ಬಗೆದು ರಕ್ತವನ್ನೂ ಕುಡಿದಿದ್ದನಂತೆ!
ಕಳೆದ ತಿಂಗಳು ಬೆಂಗಳೂರಿನ ಡಿಜೆ ಹಳ್ಳಿಯ ಶಾಂಪುರ ರೈಲ್ವೆ ಗೇಟ್ ಬಳಿ ಎಸಿ ಮೆಕ್ಯಾನಿಕ್ ಶುಬಾನ್ ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಡಿಜೆ ಹಳ್ಳಿ ಪೊಲೀಸರು ತಬ್ರೇಜ್, ನಿಜಾಮ್ ಮತ್ತು ಅಲಿ @ ಅಂಡು ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಮುಖ ಆರೋಪಿ ತಬ್ರೇಜ್ ಕೊಲೆಯ ಭೀಕರತೆ ಮತ್ತು ಅದಕ್ಕೆ ಕಾರಣವನ್ನೂ ಬಾಯ್ಬಿಟ್ಟಿದ್ದಾನೆ. ಅದರ ಡಿಟೇಲ್ಸ್​ ಇಲ್ಲಿದೆ ನೋಡಿ.
ಇದನ್ನೂ ಓದಿರಿದುರಂತ ಅಂತ್ಯಕಂಡ ಕ್ಯಾನ್ಸರ್​ ರೋಗಿ… ತಾನೇ ಸಿದ್ಧಪಡಿಸಿದ ಚಿತೆಗೆ ಹಾರಿ ಪ್ರಾಣಬಿಟ್ಟರು!
ತಬ್ರೇಜ್ ಪತ್ನಿಯ ಜತೆ ಶುಬಾನ್ ಅನೈತ್ತಿಕ ಸಂಬಂಧ ಹೊಂದಿದ್ದ. ತಬ್ರೇಜ್​ಗೆ ಗೊತ್ತಾಗದಂತೆ ಈತನ ಹೆಂಡತಿಯನ್ನು ಕರೆದೊಯ್ದ ಶುಬಾನ್, ತುಮಕೂರಿನಲ್ಲಿ ವಾಸವಿದ್ದ. ಕಳೆದ ತಿಂಗಳು ವಿಳಾಸ ಪತ್ತೆ ಮಾಡಿದ ತಬ್ರೇಜ್ ತಂಡ, ಆತನನ್ನು ಕಿಡ್ನ್ಯಾಪ್ ಮಾಡಿಕೊಂಡು ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿತು. ಬಳಿಕ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಡಿಜೆ ಹಳ್ಳಿ ಪೊಲೀಸರು ಹಂತಕರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಬ್ರೇಜ್ ಕೊಲೆಯ ಭೀಕರತೆ ಬಗ್ಗೆ ಬಿಚ್ಚಿಟ್ಟ ಸತ್ಯ ಎಂತಹವರಿಗೂ ಬೆಚ್ಚಿಬೀಳಿಸುತ್ತದೆ. ಶುಬಾನ್​ನ ಗಂಟಲು ಕತ್ತರಿಸಿ ರಕ್ತ ಕುಡಿದಿದ್ದಾಗಿ ತಬ್ರೇಜ್ ವಿವರಿಸಿದ್ದಾನೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್​ ಪಿಕ್ ಪಾಕೇಟರ್ ಆಗಿದ್ದ. ಕೊಲೆಗೆ ಸಹಕರಿಸಿದ ನಿಜಾಮ್ ಮತ್ತು ಅಲಿ @ ಅಂಡು ಕೂಡ ಈಗ ಜೈಲಿನಲ್ಲಿದ್ದಾರೆ.
ಇದನ್ನೂ ಓದಿರಿಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
