ಬೆಂಗಳೂರು:ಇಲ್ಲೊಬ್ಬ ಪತಿ, ತನ್ನ ಹೆಂಡತಿಯ ನಿದ್ದೆ ಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ! ಹೌದು… ಇದು ವಿಚಿತ್ರವಾದರೂ ಸತ್ಯ. ಈ ಪತಿರಾಯ, ‘ನನ್ ಹೆಂಡ್ತಿ ತಡವಾಗಿ ಏಳ್ತಾಳೆ’ ಎಂದು ಬಸವನಗುಡಿ ಠಾಣೆಗೆ ದೂರು ನೀಡಿದ್ದಾನೆ.
ದೂರಿನಲ್ಲಿ ”ರಾತ್ರಿ ಮಲಗಿದರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡ್ತಾಳೆ. ಸಂಜೆ 5-30‌ಕ್ಕೆ ಮಲಗಿದ್ರೆ ರಾತ್ರಿ 9-30 ಗೆ ಎದ್ದೇಳುತ್ತಾಳೆ. ಈ ರೀತಿ ಕಳೆದ ಐದು ವರ್ಷದಿಂದಲೂ ಮಾಡುತ್ತಿದ್ದಾಳೆ. ಆಕೆ ಅಡುಗೆ ಕೂಡ ಮಾಡುವುದಿಲ್ಲ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ಇಷ್ಟು ದಿನಗಳ ಕಾಲ ನಾನು ಪ್ರಶ್ನಿಸದೆ ಸುಮ್ಮನಿದ್ದೆ. ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ಕೂಡ ನಡೆಸಿದ್ದಾಳೆ. ನನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬಸ್ಥರಿಂದ ನರಕಯಾತನೆಯಾಗಿದೆ. ಹೀಗಾಗಿ ನನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಉಲ್ಲೇಖಿಸಿರುವ ನೊಂದ ಗಂಡ ವಿಧಿಯಿಲ್ಲದೇ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.

ಈ ರೀತಿ ನೋವುಂಡಿರುವ ಪತಿಯ ಹೆಸರು ಕಮ್ರಾನ್ ಖಾನ್ ಎಂದು. ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ತನ್ನನ್ನ ಪತ್ನಿ ಆಯೇಷಾ ಫರ್ಹಿನ್ ಮದ್ವೆಯಾಗಿದ್ದಾಳೆ‌. ಆಕೆಗೆ ಮದುವೆಗೆ ಮುಂಚೆಯೇ ಖಾಯಿಲೆಗಳಿದ್ದವು. ಆದರೆ ಅದನ್ನು ಮರೆ ಮಾಚಿ ಐದು ವರ್ಷದ ಹಿಂದೆ ನನಗೆ ಆಕೆಯನ್ನ ಮದ್ವೆ ಮಾಡಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪತ್ನಿ ಇದೀಗ ಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನ ಮನೆಗೆ ಆಹ್ವಾನಿಸಿ ಆ ನೆಪದಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈಕೆ ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ಪತಿಯ ಜತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ ಎಂದು ಆರೋಪಿಸಲಾಗಿದೆ. ಪತಿಯ ಬಗ್ಗೆ ಕಿಂಚಿತ್ತೂ ಪ್ರೀತಿ, ಮಮಕಾರ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಮತ್ತು ರಾಯಲ್ ಲೈಫ್ ಲೀಡ್ ಮಾಡಲು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ಪತಿ ಕಮ್ರಾನ್ ಖಾನ್ ದೂರು ನೀಡಿದ್ದಾರೆ.
ಈ ದೂರಿನಲ್ಲಿ ಪತ್ನಿ ಆಯೇಷಾ, ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ಪತಿ ಕಮ್ರಾನ್ ದೂರು ದಾಖಲಿಸಿದ್ದಾರೆ. ಬಸವನಗುಡಿ‌ ಪೊಲೀಸ್ ಠಾಣೆಯಲ್ಲಿ ಪತ್ನಿಯ ಕಿರುಕುಳ ವಿರುದ್ಧ ಪತಿ ದೂರು ನೀಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
