ಬೆಂಗಳೂರು:ತನ್ನ ಹೆಂಡತಿಯನ್ನೇ ಡಂಬೆಲ್ಸ್​​ ಬಳಸಿ ಇಲ್ಲೊಬ್ಬ ಪತಿಯಾರ ಭೀಕರವಾಗಿ ಕೊಲೆ ಮಾಡಿದ್ದಾನೆ.
ಈತ ಡಂಬೆಲ್​ ಬಳಸಿ ಹೆಂಡತಿಯ ತಲೆಗೆ ತೀವ್ರವಾಗಿ ಹೊಡೆದಿದ್ದು ರಕ್ತ ಧಾರಾಕಾರವಾಗಿ ನೆಲದಲ್ಲಿ ಹರಿದಿದೆ. ಮಹಿಳೆಯ ಮುಖವೂ ಒಮ್ಮೆಗೆ ಗುರುತು ಸಿಗದಷ್ಟು ರಕ್ತಸಿಕ್ತವಾಗಿದೆ. ಅಂದಹಾಗೆ ಈ ಘಟನೆ ಕಂಡು ಬಂದದ್ದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ.
ಮೊರೀಸ್ ಎಂಬಾತ, ತನ್ನ ಪತ್ನಿಯಾದ ಲೈದಿಯಾಳನ್ನು(44) ಕೊಲೆ ಮಾಡಿದ್ದಾನೆ. ಬೆಳಗ್ಗೆ 9.30ಕ್ಕೆ ಈ ಘಟನೆ ನಡೆದಿದ್ದು ಮೃತದೇಹ ಇರುವ ಕೊಠಡಿಯಲ್ಲಿ ರಕ್ತ ಧಾರಾಕಾರವಾಗಿ ಹರಿದಿದೆ.
ಇವರಿಬ್ಬರೂ ಹದಿನೆಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ 3 ಗಂಡು ಮಕ್ಕಳಿದ್ದು ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು. ಹೆಂಡತಿಗೆ ಅನೈತಿಕ ಸಂಬಂಧ ಇದೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಆಗಾಗ ಇಬ್ಬರ ಮಧ್ಯೆ ಜಗಳ ಆಗುತ್ತಿತ್ತು. ಮಕ್ಕಳು ಶಾಲೆಗೆ ಹೋದ ಮೇಲೆ ಇವರ ನಡುವೆ ಜಗಳ ಶುರುವಾಗಿದ್ದು ಈ ವೇಳೆ ಮಾತಿಗೆ ಮಾತು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ಸಂದರ್ಭ ಸಿಟ್ಟಿನಿಂದ ಮನೆಯಲ್ಲಿದ್ದ ಡಂಬೆಲ್ಸ್ ತೆಗೆದುಕೊಂಡ ಪತ್ನಿಗೆ ಆರೋಪಿ ಹೊಡೆದಿದ್ದಾನೆ. ಈತನಲ್ಲಿ ತನ್ನ ಹೆಂಡತಿಯ ಮೇಲೆ ಅದೆಷ್ಟು ದ್ವೇಷ ಇತ್ತೋ ಗೊತ್ತಿಲ್ಲ. ಆದರೆ ಲೈದಿಯಾ ಸಾಯುವವರೆಗೂ ಆಕೆಯ ತಲೆಗೆ ಡಂಬೆಲ್ಸ್​ನಿಂದ ಹೊಡೆಯುತ್ತಲೇ ಇದ್ದ! ಸದ್ಯ ಆರೋಪಿ ಮೋರಿಸ್​ನನ್ನು ಪೊಲೀಸರು ಬಂಧಿಸಿದ್ದು ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:sixteen − 11 =
Remember me
