ಬೆಂಗಳೂರು:ಪಾನಮತ್ತನಾಗಿ ಹೋಗಿ ಇನ್ಯಾರದ್ದೋ ಪತ್ನಿಯನ್ನು ಕಳಿಸು ಎಂದವ ಕೊಲೆಯಾಗಿ ಹೋಗಿದ್ದಾನೆ. ತನ್ನ ಪತ್ನಿಯನ್ನು ಕರೆದ ಎಂಬ ಸಿಟ್ಟಿನಿಂದ ಆಕೆಯ ಪತಿ ಬಾರಿಸಿದ ಹೊಡೆತಕ್ಕೆ ಪಾನಮತ್ತ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನಿ ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ
ಮಣಿಕಂಠ ಎಂಬಾತ ಕೊಲೆಯಾಗಿ ಹೋದ ಪಾನಮತ್ತ ವ್ಯಕ್ತಿ. ಸುರೇಶ್ ಕೊಲೆ ಮಾಡಿದ್ದ ಆರೋಪಿ. ಸಿದ್ಧಾಪುರ ಪೊಲೀಸರು ಸುರೇಶ್​ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಕಂಠನ ಸಂಬಂಧಿಕರು ಅನುಮಾನದ ಮೇರೆಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಎರಡನೇ ಮಹಡಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ 3 ವರ್ಷದ ಮಗು!
ಕುಡಿದ ಮತ್ತಿನಲ್ಲಿ ಸುರೇಶ್ ಮನೆ ಬಳಿಗೆ ಬಂದಿದ್ದ ಮಣಿಕಂಠ, ನೀನು ಕೆಳಗೆ ಬಾ, ನಿನ್ನ ಪತ್ನಿಯನ್ನು ಕಳಿಸು ಎಂದು ಸುರೇಶ್​ಗೆ ಹೇಳಿದ್ದ. ಇದರಿಂದ ಕೋಪಗೊಂಡ ಸುರೇಶ್ ರಿಪೀಸ್​ ಪಟ್ಟಿಯಿಂದ ಮಣಿಕಂಠನಿಗೆ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ಮಣಿಕಂಠನ ತಲೆಗೆ ಗಂಭೀರ ಗಾಯವಾಗಿತ್ತು. ನಂತರ ಮಣಿಕಂಠ ಕುಡಿದು ಬಿದ್ದಿದ್ದಾನೆ ಎಂದು ಆತನ ಕುಟುಂಬಸ್ಥರಿಗೆ ಸುರೇಶ್ ತಿಳಿಸಿದ್ದ. ಅವರು ಮಣಿಕಂಠನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವಿಗೀಡಾಗಿದ್ದ. ಬಳಿಕ ಮಣಿಕಂಠನ ಸಂಬಂಧಿಕರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಸುರೇಶ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
