ಹಾಸನ:ನಿನ್ನೆ(ಶುಕ್ರವಾರ) ಮಧ್ಯರಾತ್ರಿ ಪತ್ನಿಯ ಕುತ್ತಿಗೆಗೆ ವೇಲ್​ನಿಂದ ಬಿಗಿದು ಕೊಂದ ಪತಿ ಬಳಿಕ ತಾನಾಗೇ ಪೊಲೀಸ್​ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ.
ಎಸ್.ಎಂ. ಕೃಷ್ಣನಗರ ಬಡಾವಣೆಯ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ನಯನ (32) ಮೃತಳು. ಆರೋಪಿ ಲೋಹಿತ್ ಕುಮಾರ್​ ಪೊಲೀಸರ ವಶದಲ್ಲಿದ್ದಾನೆ. ದಂಪತಿಯ ಇಬ್ಬರು ಮಕ್ಕಳೀಗ ಅನಾಥವಾಗಿವೆ. ಅಷ್ಟಕ್ಕೂ ಆ ರಾತ್ರಿ ಏನಾಯ್ತು ಗೊತ್ತಾ?ಇದನ್ನೂ ಓದಿರಿಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!
ಚಿತ್ರದುರ್ಗ ಮೂಲದ ಕಾರು ಚಾಲಕ ಲೋಹಿತ್​ ಕುಮಾರ್​ ಜತೆ ನಯನಾ ಮದುವೆ 16 ವರ್ಷದ ಹಿಂದೆ ನಡೆದಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದ್ದ ಸಂಸಾರದಲ್ಲಿ ಕೆಲ ವರ್ಷಗಳಿಂದ ಬಿರುಕು ಮೂಡಿತ್ತು. ಪತ್ನಿ ಮೇಲೆ ಲೋಹಿತ್ ಅನೈತಿಕ ಸಂಬಂಧದ ಆರೋಪ ಹೊರಿಸಿದ್ದ. ಈ ಕುರಿತು ಮನೆಯಲ್ಲಿ ಆಗಾಗ ಜಗಳಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿvideo/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…
ಶುಕ್ರವಾರ ರಾತ್ರಿ 1.30ರ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ನಯನಾಳ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ನಂತರ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿವಕೀಲ ನೌಷಾದ್​ಗೆ ಗುಂಡಿಕ್ಕಿದ್ದು ಭೂಗತ ಪಾತಕಿ ರವಿ ಪೂಜಾರಿ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + four =
Remember me
