ಚಾಮರಾಜನಗರ:ಒಬ್ಬರನ್ನು ಕೊಲೆ ಮಾಡುವುದೇ ದೊಡ್ಡ ವಿಕೃತಿ. ಇನ್ನು ಕೊಲೆ ಮಾಡಿದ ಬಳಿಕ ವಿಕ್ಷಿಪ್ತವಾಗಿ ನಡೆದುಕೊಳ್ಳುವುದು, ಶವವನ್ನೂ ನೋಡಿ ಸಂಭ್ರಮಿಸುವುದು ಅದಕ್ಕಿಂತ ದೊಡ್ಡ ವಿಕೃತಿ. ಅಂಥದ್ದೊಂದು ವಿಕೃತ ಮನೋಭಾವವನ್ನು ಇಲ್ಲೊಬ್ಬ ಪತ್ನಿಯನ್ನು ಕೊಂದು ತೋರಿದ್ದಾನೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿ ಧರ್ಮಪುರಿ ಜಿಲ್ಲೆ ಎರಭಯ್ಯನಹಳ್ಳಿಯ ಮುನಿರಾಜು ಕೊಲೆ ಆರೋಪಿ. ಈತನ ಪತ್ನಿ ಲಕ್ಷ್ಮಿ ಕೊಲೆಯಾದ ಮಹಿಳೆ.
ಇದನ್ನೂ ಓದಿ:6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ
ಈತ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬಳಿಕ ಅವಳ ರಕ್ತಸಿಕ್ತ ಶವದ ಫೋಟೋವನ್ನು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದ. ನಂತರ ಈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ಲಕ್ಷ್ಮಿ ಪತಿಯನ್ನು ತೊರೆದು ಬಂದು ಪರಪುರುಷನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದಳು. ಇದರಿಂದ ಬೇಸತ್ತಿದ್ದ ಮುನಿರಾಜ್​ ನಾಗಮಲೆಗೇ ಬಂದು ಈ ಕೃತ್ಯವೆಸಗಿದ್ದಾನೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
