ಹಾವೇರಿ:ಗಂಡ-ಹೆಂಡತಿ ಮಧ್ಯೆ ನಡುರಸ್ತೆಯಲ್ಲೇ ನಡೆದ ಮಾರಾಮಾರಿಯಲ್ಲಿ ಇಬ್ಬರೂ ಗಂಭೀರ ಗಾಯಕ್ಕೊಳಗಾಗಿದ್ದು, ಆ ಪೈಕಿ ಪತಿ ಮೃತಪಟ್ಟಿದ್ದಾನೆ. ಪತಿ ಮೈಲಪ್ಪ ತಂಬೂರಿ (50) ಗಂಭೀರ ಗಾಯಕ್ಕೊಳಗಾಗಿ ಅಸುನೀಗಿದ್ದರೆ, ಪತ್ನಿ ಮಾದೇವಕ್ಕ ಮೈಲಪ್ಪ ತಂಬೂರಿಯ ಸ್ಥಿತಿ ಚಿಂತಾಜನಕವಾಗಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ನಡುರಸ್ತೆಯಲ್ಲಿ ಈ ದಂಪತಿ ಹೊಡೆದಾಡಿಕೊಂಡಿದ್ದರು. ಹಿಂಬದಿಯಿಂದ ಬಂದ ಪತಿ, ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು, ನೋಡನೋಡುತ್ತಿದ್ದಂತೆ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಇದೀಗ ಮೃತಪಟ್ಟಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿತ್ತು.
ಹಿಂಬದಿಯಿಂದ ಬಂದವ ಪತ್ನಿ ತಲೆಗೆ ಮಚ್ಚು ಬೀಸಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡ! ನಡುರಸ್ತೆಯಲ್ಲೇ ದಂಪತಿ ನರಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
