ಹಾಸನ:ಇಲ್ಲೊಬ್ಬ ಕಿರಾತಕ ರಸ್ತೆಯಲ್ಲೇ ತನ್ನ ಪತ್ನಿಯ ಕತ್ತುಸೀಳಿ ಬರ್ಬರವಾಗಿ ಕೊಂದು ಹಾಕಿದ್ದಾನೆ.
ಹೊಳೆನರಸೀಪುರದ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆಯಲ್ಲಿ ಶನಿವಾರ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶಾಲಿನಿ ಕೊಲೆಯಾದ ದುರ್ದೈವಿ. ಪತಿ ಪುನೀತ್ ಕೊಲೆ ಆರೋಪಿ. ಈ ದಂಪತಿಗೆ ಒಂದು ವರ್ಷದ ಗಂಡು ಮಗು ಕೂಡ ಇದೆ.
ಹೊಳಬಿಲ್ಲೆನಹಳ್ಳಿಯ ಶಾಲಿನಿಯನ್ನು ಎರಡು ವರ್ಷದ ಹಿಂದೆ ಕವಿನಕೋಟೆ ಗ್ರಾಮದ ನಿವಾಸಿ ಪುನೀತ್ ಎಂಬಾತನ ಜತೆ ಅವರ ತಂದೆ ಮದುವೆ ಮಾಡಿದ್ದರು. ಮದುವೆಯಾಗಿ ಎರಡು ವರ್ಷವಾಗಿತ್ತು. ಶನಿವಾರ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆ ಮಧ್ಯೆ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ಪುನೀತ್​ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಕತ್ತಿಗೆಯನ್ನೇ ಸೀಳಿದ್ದಾನೆ. ಈ ವೇಳೆ ಶಾಲಿನಿಯ ರಕ್ಷಣೆಗೆ ಬಂದ ಗ್ರಾಮಸ್ಥರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದ. ತೀವ್ರ ರಕ್ತಸ್ರಾವವಾಗಿ ಶಾಲಿನಿ ಸ್ಥಳದಲ್ಲೇ ಕೊನೆಯುಸಿರೆಳೆದಳು.
ಆರೋಪಿ ಪುನೀತ್​ ತಪ್ಪಿಸಿಕೊಳ್ಳದಂತೆ ಹಿಡಿದು ಕೂಡಿ ಹಾಕಿದ್ದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅಕ್ಕನ ಮನೆಗೆ ಬಾರದ ಬಾವ, ಸಿಟ್ಟಿಗೆದ್ದ ಬಾಮೈದ ಮಹಿಳೆಯನ್ನು ಕೊಂದುಬಿಟ್ಟ!

ನಾನು ಮಾಜಿ ಡಿಸಿಎಂ ಅಣ್ಣನ ಮಗಳು… ಮದುವೆ ಆಗದಿದ್ರೆ ರೇಪ್​ ಕೇಸ್​ ಹಾಕ್ತೀನಿ: ಬೆಚ್ಚಿಬೀಳಿಸುತ್ತೆ ಆಕೆಯ ಹಿಸ್ಟರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
