ಬೆಂಗಳೂರು:ಪತ್ನಿ ಮಾಡಿದ್ದ ಕಬಾಬ್ ಚೆನ್ನಾಗಿರಲಿಲ್ಲ ಆಕೆಗೆ ಇರಿದು ಹಲ್ಲೆ ಮಾಡಿದ್ದ ಪತಿ, ಅದರ ಮರುದಿನವೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಎಂ. ಸುರೇಶ್​ ಹಾಗೂ ಆತನ ಪತ್ನಿ ಶಾಲಿನಿ ಇಬ್ಬರೂ ಗಾರ್ಮೆಂಟ್​ ನೌಕರರಾಗಿದ್ದು, ಬನ್ನೇರುಘಟ್ಟ ಬಳಿಯ ಮನೆಯೊಂದರಲ್ಲಿ ನೆಲೆಸಿದ್ದರು. ಮಂಗಳವಾರ ಸಂಜೆ ಮನೆಗೆ ಬಂದಿದ್ದ ಪತಿ, ಪತ್ನಿ ಬಳಿ ಕಬಾಬ್​ ಮಾಡುವಂತೆ ಹೇಳಿದ್ದ. ಆಕೆ ಮಾಡಿದ್ದರೂ ಅದು ಅಷ್ಟು ರುಚಿಕರವಾಗಿರಲಿಲ್ಲ ಅಂತ ಸಿಟ್ಟಾದ ಸುರೇಶ್, ಆಕೆಯ ತಲೆ, ಕೈಗೆಲ್ಲ ಇರಿದು, ಹಲ್ಲೆ ಮಾಡಿದ್ದ.
ಸಹಾಯ ಕೋರಿ ಆಕೆ ಕಿರುಚಿದ್ದನ್ನು ಕೇಳಿಸಿಕೊಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯವರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆಕೆಯ ಹೇಳಿಕೆಯನ್ನೂ ಪಡೆದಿದ್ದರು. ಇತ್ತ ಶಾಲಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಬುಧವಾರ ಪೊಲೀಸರು ಸುರೇಶ್​ನನ್ನು ಹುಡುಕಿಕೊಂಡು ಆತನ ಮನೆಗೆ ಹೋಗಿದ್ದರು. ಆದರೆ ಅಷ್ಟರಲ್ಲಾಗಲೇ ಆತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರಿಗೆ ಕಂಡುಬಂದಿತ್ತು. ಹೆಂಡತಿ ಮೇಲಿನ ಹಲ್ಲೆಯ ಪ್ರಕರಣ ಗಂಭೀರವಾಗಬಹುದು ಎಂಬ ಭಯದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..

ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
