ಯಶವಂತಪುರ:ಪತ್ನಿ ಮಾತನಾಡ್ತಿಲ್ಲ ಎಂದು ಆಸ್ಪತ್ರೆಗೆ ಹೊತ್ತು ತಂದು ಹೈಡ್ರಾಮ ಸೃಷ್ಠಿ ಮಾಡಿದ್ದ ಪತಿಯೊಬ್ಬನ ಅಸಲಿ ಮುಖ ಪೊಲೀಸ್​ ತನಿಖೆ ವೇಳೆ ಹೊರಬಿದ್ದಿರುವ ಘಟನೆ ಬೆಂಗಳೂರಿನ ಯಶವಂತರಪುರದಲ್ಲಿ ನಡೆದಿದೆ.
ಆರೋಪಿಯನ್ನು ಶರತ್​ ಎಂದು ಗುರುತಿಸಲಾಗಿದ್ದು, ಪ್ರಿಯಾ ಮೃತ ಮಹಿಳೆಯಾಗಿದ್ದಾಳೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ:ಆರೋಪಿ ಶರತ್​ ಮೊದಲ ಪತ್ನಿ ಇದ್ದರೂ,​ ಪ್ರಿಯಾಳ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದ. ಮೊದಲ ಪತ್ನಿ ಬಳಿ ಹೋಗುತ್ತಿಯಾ ಅಂತ ಎರಡನೇ ಪತ್ನಿ ಪದೇ ಪದೇ ಜಗಳವಾಡುತ್ತಿದ್ದಳು. ಎರಡು ದಿನಗಳ ಹಿಂದೆ ಕೂಡ ಈ ವಿಷಯವಾಗಿ ಶರತ್ ಮತ್ತು ಪ್ರಿಯಾ ನಡುವೆ ಜಗಳವಾಗಿದೆ.
ಈ ವೇಳೆ ಪತ್ನಿ ಪ್ರಿಯಾಗೆ ಶರತ್ ಥಳಿಸಿದ್ದು, ಹೊಡೆತದ ರಭಸಕ್ಕೆ ಕೆಳಗೆ ಬಿದ್ದು ಪತ್ನಿ ಸಾವನ್ನಪ್ಪಿದ್ದಳು‌. ಆಗ ಶರತ್ ತನ್ನ ಪತ್ನಿ ಪ್ರಿಯಾ ಮಾತನಾಡ್ತಿಲ್ಲ ಎಂದು ಗೋಳಾಡುತ್ತ ಆಸ್ಪತ್ರೆಗೆ ಹೊತ್ತು ತಂದಿದ್ದ. ಗಂಡನ ಗೋಳಾಟ ಕಂಡು ವೈದ್ಯರು ಚೆಕಪ್ ಮಾಡಿದಾಗ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಆರೋಪಿಯು ಪತ್ನಿ ಸಾವಿನ ವಿಚಾರ ತಿಳಿದು ಭಾರಿ ಜೋರಾಗಿ ಗೋಳಾಡಿ ಡ್ರಾಮಾ ಮಾಡಿದ್ದ. ಆಗ ಪೊಲೀಸರು ಈ ಬಗ್ಗೆ ಅನುಮಾನಾಸ್ಪದ ಸಾವು ದೂರು ದಾಖಲಿಸಿದ್ದರು. ಆದರೆ ತನಿಖೆ ವೇಳೆ ಶರತ್​ನ ಹೈಡ್ರಾಮ ನೋಡಿ ಅನುಮಾನಗೊಂಡು ಪೊಲೀಸರು ಶವಪರೀಕ್ಷೆಯನ್ನು ಮಾಡಿಸಿದ್ದಾರೆ.
ಈ ವೇಳೆ ಪ್ರಿಯಾ ಕುತ್ತಿಗೆಯ ಬಳಿ ಇರುವ ಪಕ್ಕೆಲುಬು ಮುರಿದು ಬೆಳಕಿಗೆ ಬಂದಿದೆ. ವೈದ್ಯರಿಂದ ಮಾಹಿತಿಯನ್ನು ಪಡೆದ ಪೊಲೀಸರು ಆರೋಪಿ ಶರತ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
