ಬೆಂಗಳೂರು:‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬ ಗಾದೆಮಾತಿದೆ. ಇದು ಆ ಗಾದೆಯನ್ನೇ ನೆನಪಿಸಬಹುದಾದಂಥ ಪ್ರಕರಣ. ಹೆಂಡತಿ ದೈಹಿಕ ಸಂಪರ್ಕಕ್ಕೆ ಅಪೇಕ್ಷಿಸಿದರೂ ಅದಕ್ಕೆ ಮುಂದಾಗದ ಗಂಡ, ಹೆಂಡತಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿ, ಮಾಂತ್ರಿಕರನ್ನು ಮನೆಗೆ ಕರೆಸಿ ಕಿರುಕುಳ ನೀಡಿದ್ದಾನೆ.
ಪತಿ ಹೀಗೆ ಉಪಟಳ ಕೊಡುತ್ತಿರುವ ಕುರಿತು ಬಸವನಗುಡಿ ನಿವಾಸಿಯಾಗಿರುವ 36 ವರ್ಷದ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೆ.ಪಿ.ನಗರದ ರೋಷನ್​ ಹಾಗೂ ಆತನ ತಂದೆ-ತಾಯಿ ವಿರುದ್ಧ ಮಹಿಳೆ ದೂರು ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿಕೊಂಡಿದ್ದಾರೆ. ಸಂತ್ರಸ್ತೆಗೆ ರೋಷನ್​ ಜೊತೆ 2019ರಲ್ಲಿ ಮದುವೆಯಾಗಿತ್ತು. ಆದರೆ ಮಗುವಿನ ವಿಚಾರವಾಗಿ ಮಾತನಾಡಿದರೆ ಪತಿ ಲೈಂಗಿಕಾಸಕ್ತಿ ತೋರಿಸುತ್ತಿರಲಿಲ್ಲ. ಪತಿ ಲೈಂಗಿಕ ಸಂಪರ್ಕವನ್ನು ಹೊಂದದ ವಿಚಾರವಾಗಿ ಪ್ರಶ್ನಿಸುತ್ತಿದ್ದುದಕ್ಕೆ ತನಗೆ ದೆವ್ವ ಹಿಡಿದಿದೆ ಎಂದು ಪತಿ ಹಾಗೂ ಆತನ ತಂದೆ-ತಾಯಿ ಬೈಯುತ್ತಿದ್ದರು.
ಅಷ್ಟಕ್ಕೆ ಸುಮ್ಮನಾಗದ ಮೂವರೂ ರಾತ್ರಿ ಮಂತ್ರವಾದಿಯನ್ನು ಮನೆಗೆ ಕರೆಸಿ, ನನ್ನೊಳಗೆ ಭೂತ ಹೊಕ್ಕಿದೆ ಎಂದು ಕೈಕಾಲು ಕಟ್ಟಿ, ಕೂದಲು ಕತ್ತರಿಸಿ ಹಿಂಸೆ ನೀಡಿದ್ದಾರೆ. ತಾವು ಹೇಳಿದಂತೆ ಕೇಳದಿದ್ದರೆ ನಿನಗೂ ನಿಮ್ಮ ಮನೆಯವರಿಗೂ ಪ್ರಾಣಾಪಾಯ ಇದೆ ಎಂದು ಕಿರುಕುಳ ನೀಡುತ್ತಿದ್ದಾರೆ. ಮಾತ್ರವಲ್ಲ ತನ್ನನ್ನು ತವರು ಮನೆಯಲ್ಲಿ ಬಿಟ್ಟುಹೋಗಿದ್ದು, ಅಲ್ಲಿಯೇ ಇರಲು ಹೇಳುತ್ತಿದ್ದು ವಾಪಸ್ ಕರೆದೊಯ್ಯುತ್ತಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!

ನಾಲ್ಕು ತಿಂಗಳ ಬಳಿಕ ಮಂಡ್ಯದ ಕೊಲೆ ರಹಸ್ಯ ಬಯಲಾಯ್ತು… ದೆವ್ವ ಆಗ್ತಾಳೆಂದು ಪತ್ನಿಯ ತುಂಡರಿಸಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
