ಮೈಸೂರು:ಅನೈತಿಕ ಸಂಬಂಧ ಸಂಶಯ ಹಿನ್ನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವ ಘಟನೆ ಹುಣಸೂರಿನ ಕಲ್ಕುಣಿಕೆ ಹೌಸಿಂಗ್​ ಬೋರ್ಡ್​ ಕಾಲನಿಯಲ್ಲಿ ನಡೆದಿದೆ.
ಸೌಮ್ಯ (30) ಕೊಲೆಯಾದ ಮಹಿಳೆ. ಆರೋಪಿ ಪತಿ ರವಿ ಹಾಗೂ ಸೌಮ್ಯ 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ರವಿಗೆ ಇತ್ತೀಚೆಗೆ ತನ್ನ ಪತ್ನಿಯ ನಡತೆಯ ಮೇಲೆ ಸಂಶಯ ಶುರುವಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಅನೇಕ ಬಾರಿ ಇಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಸಂಧಾನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು.
ಇದನ್ನೂ ಓದಿರಿ:VIDEO| ಮೈಕಲ್​ ಜಾಕ್ಸನ್​ ಮೂನ್​ ವಾಕ್​ ಮೂಲಕ ಸಂಚಾರ ನಿರ್ವಹಿಸೋ ಪೇದೆಯ ಹಿಂದಿದೆ ಕಣ್ಣೀರ ಕತೆ..!
ಆದರೆ, ರವಿಗೆ ಸೌಮ್ಯಳ ಮೇಲಿನ ಸಂಶಯ ಮಾತ್ರ ಹೋಗಲಿಲ್ಲ. ಪತ್ನಿಯ ಮೇಲೆ ದಿನ ಕಳೆದಂತೆ ರಾಕ್ಷಸನಾಗಿದ್ದ ರವಿ ಕಳೆದ ಭಾನುವಾರ ರಾತ್ರಿ ಮಲಗಿರುವಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿರುವ ಆರೋಪ ಕೇಳಿಬಂದಿದೆ. ಇದಕ್ಕೂ ಮುನ್ನ ಉಸಿಗಟ್ಟಿಸಿದಾಗ ಪತ್ನಿ ಮೃತಪಟ್ಟಿಲ್ಲವೇನೋ ಅಂದುಕೊಂಡು ವೇಲ್​ನಿಂದ ಬಿಗಿದು ಸಾಯಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಸೋಮವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿದ್ದನ್ನು ನೋಡಿ ಅನುಮಾನಗೊಂಡ ಸ್ಥಳೀಯರು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲು, ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ರವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್​: ನರಕಯಾತನೆ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ!

ಇದು ಗಂಡ-ಹೆಂಡತಿ, ಅಕ್ಕ-ತಂಗಿಯಿಂದ ಹನಿಟ್ರ್ಯಾಪ್​; ಫೇಸ್​ಬುಕ್​ ಮೂಲಕ ಹಾಕುತ್ತಾರೆ ಗಾಳ…

ಅದ್ಧೂರಿ ಮದ್ವೆಯಾದ ಮಾರನೇ ದಿನವೇ ಪತ್ನಿಗೆ ಬಿಗ್​ ಶಾಕ್​ ಕೊಟ್ಟ ಪತಿಯಿಂದ ಮತ್ತೊಂದು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
