ಬೆಂಗಳೂರು:ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡು ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ ಪತಿ ಸೇರಿ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ದಿವಾಕರ್ ಮತ್ತು ಈತನ ಚಿಕ್ಕಪ್ಪನ ಮಗ ಪ್ರತೀಭ್ ಬಂಧಿತ ಆರೋಪಿಗಳು. ಲಿಂಗರಾಜಪುರದ ನಿವಾಸಿ ನಿಖಿತಾ ಚಾಕು ಇರಿತಕ್ಕೊಳಗಾದ ಪತ್ನಿ. ಜೂ. 21ರ ಸಂಜೆ ಬಾಣಸವಾಡಿಯ ಸೇಂಟ್​ ಜೋಸೆಫ್​ ಚರ್ಚ್ ಬಳಿ ಈ ಘಟನೆ ನಡೆದಿತ್ತು.
ನಿಖಿತಾ ಹಾಗೂ ದಿವಾಕರ್ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅತಿಯಾದ ಮದ್ಯಪಾನದ ಚಟ ಹೊಂದಿದ್ದ ದಿವಾಕರನಿಂದ ದೂರವಾಗಿದ್ದ ನಿಖಿತಾ ಲಿಂಗರಾಜಪುರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಳು. ಇತ್ತೀಚೆಗೆ ಪುನರ್‌ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ದಿವಾಕರ್ ತನ್ನ ಚಿಕ್ಕಪ್ಪನ ಮಗ ಪ್ರತೀಭ್ ಮನೆಯ ಸಮೀಪದಲ್ಲಿ ವಾಸವಿದ್ದ.
ಇದನ್ನೂ ಓದಿ:ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ಪತ್ನಿ ಸರಿ ಇಲ್ಲವೆಂದು ಅನುಮಾನ ಹೊಂದಿದ್ದ ದಿವಾಕರ್ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಜೂನ್ 21ರಂದು ಮಾತನಾಡಬೇಕು ಎಂದು ಲಿಂಗಾರಾಜಪುರದ ಆಕೆಯ ಮನೆಯಿಂದ ಕರೆದೊಯ್ಯಲು ದಿವಾಕರ್ ಹಾಗೂ ಪ್ರತೀಭ್ ಬಂದಿದ್ದರು. ಪ್ರತೀಭ್ ಬೈಕ್ ಚಾಲನೆ ಮಾಡುತ್ತಿದ್ದರೆ, ದಿವಾಕರ್ ಮಧ್ಯೆ ಕುಳಿತಿದ್ದ. ನಿಖಿತಾಳನ್ನು ಕೊನೆಯಲ್ಲಿ ಕೂರಿಸಿ ಕರೆದೊಯ್ದಿದ್ದ ಆರೋಪಿಗಳು, ಮಾರ್ಗ ಮಧ್ಯೆ ತಿರುವಿನಲ್ಲಿ ಆಕೆಯನ್ನು ಬೈಕ್‌ನಿಂದ ಬೀಳಿಸಿದ್ದರು. ಬಳಿಕ ದಿವಾಕರ್, ನಿಖಿತಾಳ ಕುತ್ತಿಗೆ, ಹೊಟ್ಟೆ, ಎದೆ ಸೇರಿ ಐದು ಕಡೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಇದನ್ನೂ ಓದಿ:ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!
ಪೊಲೀಸರಿಂದ ರಕ್ತದಾನ:ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಗಮನಿಸಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಬಾಣಸವಾಡಿ ಠಾಣಾ ಪೊಲೀಸರು ನಿಖಿತಾಳನ್ನು ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೇ ಆಕೆಗೆ ತುರ್ತಾಗಿ ರಕ್ತ ಅಗತ್ಯವಿದ್ದರಿಂದ ಪೊಲೀಸರೇ ರಕ್ತದಾನ ಮಾಡಿದ್ದರು.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಬಳಿಕ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸದ್ಯ ನಿಖಿತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಹಿಳೆಯ ಪ್ರಾಣಾ ಉಳಿಸಲು ಶ್ರಮಿಸಿದ ನಮ್ಮ ಅಧಿಕಾರಿ ಸಿಬ್ಬಂದಿಯ ಕೆಲಸ ಶ್ಲಾಘನೀಯವಾದದ್ದು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ವಾಸ್ತು ಸರಿ ಇಲ್ಲವೆಂದು ಮುಚ್ಚಿದ್ದ ದ್ವಾರವನ್ನು ತೆರೆಸಿ ಸಿಎಂ ಕಚೇರಿಗೆ ಪ್ರವೇಶಿಸಿದ ಸಿದ್ದರಾಮಯ್ಯ!

ಸಿದ್ದರಾಮಯ್ಯ ಮತಾಂತರದ ರಾಯಭಾರಿ, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ: ಆರ್.ಅಶೋಕ್ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + sixteen =
Remember me
