ಬೆಂಗಳೂರು:ಇಲ್ಲೊಬ್ಬ ಭೂಪ ತನ್ನ ಪತ್ನಿಯನ್ನೇ ಬಲವಂತವಾಗಿ ಪರಪುರುಷರೊಂದಿಗೆ ಮಲಗಿಸಿದ್ದಲ್ಲದೆ, ಅವರುಗಳ ಖಾಸಗಿ ಕ್ಷಣದ ದೃಶ್ಯವನ್ನು ಸೆರೆ ಹಿಡಿದು ಪತ್ನಿಗೆ ಹಿಂಸಿಸುತ್ತಿದ್ದ ಹೇಯ ಕೃತ್ಯ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಗಂಡನ ವಿಕೃತ ಬಲೆಗೆ ಸಿಲುಕಿ ಹತ್ತು ವರ್ಷಗಳಿಂದ ಈಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೈ ಹಿಡಿದ ಪತ್ನಿಯನ್ನ ತನ್ನ ಸ್ನೇಹಿತರೊಂದಿಗೆ ಮಂಚಕ್ಕೆ ಕಳುಹಿಸಿ ವಿಕೃತಿ ಮೆರೆಯುತ್ತಿದ್ದ ಈತ, ನಾದಿಯ ಬಾಳಿಗೂ ಮುಳುವಾಗಿದ್ದಾನೆ. ನೊಂದ ಅಕ್ಕ-ತಂಗಿ ಇಬ್ಬರೂ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ತಾವು ಅನುಭವಿಸಿದ ನರಕಯಾತನೆಯನ್ನ ದೂರಿನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ನಾನು 2011ರ ಏಪ್ರಿಲ್​ 27ರಂದು ಜಾನ್​ಪೌಲ್ ಎಂಬಾತನ ಜತೆ ಮದ್ವೆ ಆದೆ. ನಮಗೆ ಒಂದು ಗಂಡು ಮಗು ಇದೆ. ಮದ್ವೆಯಾದ ಬಳಿಕ ತನ್ನ ವರಸೆ ಬದಲಿಸಿದ ಜಾನ್​ಪೌಲ್​, ಕುಡಿತ ಚಟ ಅಂಟಿಸಿಕೊಂಡು ನಿತ್ಯ ಹಿಂಸಿಸುತ್ತಿದ್ದ. ಇಷ್ಟು ಸಾಲದು ಎಂಬಂತೆ 2015ರಲ್ಲಿ ತನ್ನ ಸ್ನೇಹಿತರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನನಗೆ ಪೀಡಿಸಿದ್ದ. ಇದಕ್ಕೆ ಒಲ್ಲೆ ಎಂದಾಗ ಮನಸೋಇಚ್ಛೆ ಥಳಿಸಿದ್ದ. ಅವಾಚ್ಯವಾಗಿ ನಿಂದಿಸಿದ್ದ. ಬೇಸತ್ತ ನಾನು, ಕೊನೆಗೆ ಗಂಡನ ಸ್ನೇಹಿತರೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದೆ. ಇವರಿಬ್ಬರ ಜತೆ ನಾನು ಇದ್ದ ಖಾಸಗಿ ಕ್ಷಣದ ದೃಶ್ಯಗಳನ್ನು ನನ್ನ ಗಂಡನೇ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದ. ಇದೆಲ್ಲವೂ ಹಿಂಸೆ ಆಗುತ್ತಿತ್ತು. ಇನ್ನುಂದೆ ನನ್ನಿಂದ ಅಸಾಧ್ಯ ಎಂದು ಇತ್ತೀಚಿಗೆ ಅದರಿಂದ ದೂರ ಉಳಿದಿರುವೆ’ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.
‘2019ರಿಂದ ನನ್ನ ತಂಗಿ ನಮ್ಮೊಂದಿಗೇ ವಾಸವಿದ್ದಳು. ಆಕೆ ಖಾಸಗಿ ಕಂಪನಿಯೊಂದರ ಉದ್ಯೋಗಿ. ಅವಳ ಮೇಲೆ ಕಣ್ಣು ಹಾಕಿದ ನನ್ನ ಗಂಡ, ನಿನ್ನ ತಂಗಿ ನನಗೆ ಬೇಕು. ಆಕೆಯನ್ನು ನನ್ನೊಂದಿಗೆ ಮಲಗುವಂತೆ ಹೇಳು ಎಂದು ನನಗೆ ಹಿಂಸಿಸಿದ್ದ. ತಂಗಿಯ ಬಾಳು ಹಾಳು ಮಾಡಬೇಡ ಎಂದರೂ ಕೇಳದೆ, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸು ಎಂದು ನನ್ನ ತಂಗಿಯನ್ನ ಬಲವಂತ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಇದರಿಂದ ಮನನೊಂದ ನಾನು ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಆಗ ತನ್ನ ಸ್ನೇಹಿತರೊಂದಿಗೆ ನೀನು ಮಲಗಿರುವ ವಿಡಿಯೋ ನನ್ನ ಬಳಿ ಇದೆ. ಅವೆಲ್ಲವನ್ನೂ ವೈರಲ್​ ಮಾಡುವೆ ಎಂದು ಬೆದರಿಕೆ ಹಾಕಿದ್ದ. ಇದಕ್ಕೆ ಹೆದರಿ ನಾನು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಾಗುತ್ತಿದ್ದೆ’ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
‘ನನಗೆ ನಿನ್ನೊಟ್ಟಿಗೆ ಇರಲು ಆಗುತ್ತಿಲ್ಲ. ಡಿವೋರ್ಸ್​ ಬೇಕೆಬೇಕು ಎಂದು 2022ರ ಡಿಸೆಂಬರ್​ 4ರ ರಾತ್ರಿ ನಾನು ಮತ್ತೆ ಕೇಳಿದೆ. ಆಗ ನನ್ನ 2 ಖಾಸಗಿ ಫೋಟೋವನ್ನ ನನ್ನ ವಾಟ್ಸ್​ಆ್ಯಪ್​ಗೆ ಕಳಿಸಿ ವೈರಲ್​ ಮಾಡುವುದಾಗಿ ಬೆದರಿಸಿದ. ಆದರೂ ನಾನು ಡಿವೋರ್ಸ್​ ಬೇಕೇಬೇಕು ಎಂದು ಒತ್ತಾಯಿಸಿದೆ. ಆಗ ಮನೆಯಲ್ಲೇ ಕುಡಿದು ನನ್ನನ್ನು ಹೊಡೆದು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದ. ಇದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ನನ್ನ ತಂಗಿ ಮೇಲೂ ಹಲ್ಲೆ ಮಾಡಿದ್ದ. ಆ ದಿನವೇ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದೆ. ಆಗ ಇದ್ಯಾವುದರ ಬಗ್ಗೆಯೂ ಹೇಳದೆ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿರುವುದಾಗಿ ಮಾತ್ರ ಹೇಳಿದ್ದೆ. ಪೊಲೀಸರು ನನ್ನ ಗಂಡನನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಆದರೂ ಈತನ ವರ್ತನೆ ಬದಲಾಗಲಿಲ್ಲ. ನನಗೂ ಮತ್ತು ನನ್ನ ತಂಗಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದನ್ನ ಮುಂದುವರಿಸಿದ್ದ. ಕುಡಿತ ಮಾತ್ರವಲ್ಲ, ಗಾಂಜಾ ಸೇವನೆಯ ದುರಾಭ್ಯಾಸವೂ ಈತನಿಗೆ ಇದೆ. ಮನೆಯಲ್ಲಿಯೇ 2 ಪಾಟ್​ಗಳಲ್ಲಿ ಗಾಂಜಾ ಗಿಡ ಬೆಳೆಸಿದ್ದಾನೆ. ದಯವಿಟ್ಟು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನನಗೆ ನರಕದಿಂದ ಮುಕ್ತಿ ನೀಡಿ’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಪಿಗೆಹಳ್ಳಿ​ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
