ಬೆಂಗಳೂರು:ಪತಿ ಸಹಿ ಹಾಕಿರುವ ಚೆಕ್​ ಬೌನ್ಸ್​ ಆದರೆ ಆತನ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್​, ಚೆಕ್​ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
ಪ್ರಕರಣ ರದ್ದುಕೋರಿ ನಗರದ ವೀಣಾಶ್ರೀ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಐ. ಅರುಣ್​ ಅವರಿದ್ದ ಪೀಠ, ಪ್ರಕರಣದಲ್ಲಿ ಬೌನ್ಸ್​ ಆಗಿರುವ ಚೆಕ್​ಗೆ ಅರ್ಜಿದಾರೆ ಸಹಿ ಹಾಕಿಲ್ಲ. ಚೆಕ್​ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಚೆಕ್​ ಅನ್ನು ಅರ್ಜಿದಾರ ಮಹಿಳೆಯ ಪತಿ ನೀಡಿದ್ದಾರೆ ಎಂದು ದೂರುದಾರರೇ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪತಿ ವಿತರಿಸಿದ ಚೆಕ್​ ಬೌನ್ಸ್​ ಆಗಿದ್ದಕ್ಕೆ ಅವರ ಪತ್ನಿಯನ್ನು ಆರೋಪಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?:ಶಂಕರ್​ ಎಂಬುವರಿಂದ ವೀಣಾಶ್ರೀ ಮತ್ತವರ ಪತಿ ಹಾಗೂ ಅತ್ತೆ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತ್ರಿಯಾಗಿ ವೀಣಾಶ್ರೀ ಅವರ ಪತಿಯ ಸಹಿ ಇರುವ ಚೆಕ್​ ನೀಡಲಾಗಿತ್ತು. ಆದರೆ, ಆ ಚೆಕ್​ ಅಮಾನ್ಯಗೊಂಡಿತ್ತು. ಇದರಿಂದ, ಶಂಕರ್​ 2017ರಲ್ಲಿ 22ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ವೀಣಾಶ್ರೀ 2ನೇ ಆರೋಪಿಯಾಗಿದ್ದರು. ಎಸಿಎಂಎಂ ಕೋರ್ಟ್​ ಪ್ರಕರಣದ ಕಾಗ್ನಿಜೆನ್ಸ್​ ತೆಗೆದುಕೊಂಡು 2017ರ ಡಿ.8ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಕ್ರಿಮಿನಲ್​ ಅರ್ಜಿ ಸಲ್ಲಿಸಿದ್ದ ವೀಣಾಶ್ರೀ, ಬೌನ್ಸ್​ ಆಗಿರುವ ಚೆಕ್​ಗೆ ನಾನು ಸಹಿ ಹಾಕಿಲ್ಲ. ಪತಿಯಷ್ಟೇ ಸಹಿ ಹಾಕಿದ್ದಾರೆ. ಆದ್ದರಿಂದ, ನೆಗೋಷಿಯಬಲ್​ ಇನ್ಸ್​ಟ್ರುಮೆಂಟ್​ ಕಾಯ್ದೆಯ ಸೆಕ್ಷನ್​ 138ರ ಅಡಿಯಲ್ಲಿ ತಮ್ಮನ್ನು ಅಭಿಯೋಜನೆಗೆ ಗುರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ತಮ್ಮ ವಿರುದ್ಧದ ಪ್ರಕರಣ ರದ್ದು ಪಡಿಸಬೇಕೆಂದು ಕೋರಿದ್ದರು.
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ರೇಣುಕಾಚಾರ್ಯರ ತಮ್ಮನ ಪುತ್ರ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ… ಕಾರಿನ ಹಿಂಬದಿ ಸೀಟಿನ ರಹಸ್ಯ ಏನು?

ಪೊಲೀಸ್​ ಕಾನ್​ಸ್ಟೆಬಲ್​ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
