ಬಾಗಲಕೋಟೆ:ವಿಧಾನಪರಿಷತ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನತ್ತ ಮೊಟ್ಟೆ ಎಸೆದ ಪ್ರಕರಣ ನಡೆದು ದಿನಗಳು ಉರುಳಿದರೂ ಆ ಪ್ರಕರಣಕ್ಕೆ ಕಾವೇರಿ ಅದು ಕೋಳಿ-ಹಂದಿವರೆಗೂ ಬಂದಿದೆ. ಮಾತ್ರವಲ್ಲ, ಮೊಟ್ಟೆ ಎಸೆತದ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಇದೀಗ ಮತ್ತೊಮ್ಮೆ ಪ್ರಸ್ತಾಪವಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿದ್ದರಾಮಯ್ಯ ಕಾರಿನತ್ತ ಮೊಟ್ಟೆ ಎಸೆತದ ಪ್ರಕರಣದ ಕುರಿತಾಗಿ ಮಾತನಾಡಿದ್ದು, ಕೊಡಗಿನಲ್ಲಿ ಲಕ್ಷಾಂತರ ಜನರ ಹಿಂದೂಗಳ ಕಗ್ಗೊಲೆಯಾಗಿದೆ. ಟಿಪ್ಪು ಸುಲ್ತಾನ್ ಸಂಧಾನಕ್ಕೆಂದು ಕರೆದು ಲಕ್ಷಕ್ಕೂ ಅಧಿಕ ಹಿಂದೂಗಳ ಕೊಲೆ‌ ಮಾಡಿದಂತಹ ಕ್ರೂರ ನೀಚ ವ್ಯಕ್ತಿ. ಕೊಡಗಿನಲ್ಲಿ ಆ ವ್ಯಕ್ತಿ ಬಗ್ಗೆ ಬಹಳ ದ್ವೇಷವಿದೆ. ಸಿದ್ದರಾಮಯ್ಯ ಹಿಂದೂಗಳ ಬಗ್ಗೆ ಹಗುರವಾಗಿ ಮಾತಾಡಿದ್ದಕ್ಕೆ ಹಿಂದುತ್ವದ ಬಗ್ಗೆ ಅಪಮಾನ ಮಾಡಿದ ಕಾರಣಕ್ಕೆ ಆ ವ್ಯಕ್ತಿ ಮೊಟ್ಟೆ ಎಸೆದಿದ್ದಾನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯಗೆ ಮೊಟ್ಟೆ ಎಸೆದು ಅಪಮಾನ ಮಾಡಿದ್ದು ಹಿಂದೂಗಳ ಸ್ವಾಭಿಮಾನದ ಪ್ರತೀಕ. ಆ ಒಬ್ಬ ವ್ಯಕ್ತಿ ಹಿಂದೂ ಬಗ್ಗೆ ಅಭಿಮಾನ ಇಟ್ಟುಕೊಂಡು ಆ ಕೆಲಸ ಮಾಡಿದ್ದಾನೆ. ಆತನ ಬಗ್ಗೆ ನನಗೆ ಅಭಿಮಾನ ಇದೆ. ಮೊಟ್ಟೆ ಎಸೆದವರು ಯಾರು? ಅವರೇನು ಬಿಜೆಪಿಯವರಲ್ಲ, ಭಜರಂಗದಳದವರಲ್ಲ, ಶ್ರೀರಾಮಸೇನೆಯವರಲ್ಲ ಎಂಬುದಾಗಿ ಯತ್ನಾಳ್ ಹೇಳಿದ್ದಾರೆ.
‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಸರು ರದ್ದಾಗುತ್ತಾ?: ಇಲ್ಲಿದೆ ಚುನಾವಣಾ ಆಯೋಗದ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
