ಚಿಕ್ಕಮಗಳೂರು:ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪದ ಬೆನ್ನಿಗೆ ಉಂಟಾದ ಪರ-ವಿರೋಧ ಅಭಿಪ್ರಾಯ ಬಳಿಕ ಹುಕ್ಕಾ ಬಾರ್​ವರೆಗೂ ತಲುಪಿದ್ದು, ವಾಗ್ವಾದಕ್ಕೆ ನೆಹರೂ ಕೂಡ ವಸ್ತುವಾಗಿದ್ದಾರೆ. ಕಾಂಗ್ರೆಸ್​​ನವರು ಬೇಕಿದ್ದರೆ ಅವರ ಕಚೇರಿಯಲ್ಲೇ ಕ್ಯಾಂಟೀನ್​-ಹುಕ್ಕಾ ಬಾರ್​ ತೆರೆದು ಇಂದಿರಾ-ನೆಹರೂ ಹೆಸರಿಟ್ಟುಕೊಳ್ಳಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಿನ್ನೆ ಹೇಳಿದ್ದಕ್ಕೆ ಕಾಂಗ್ರೆಸ್​​ನಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇಂದು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಿ.ಟಿ. ರವಿ, ಹುಕ್ಕಾ ಬಾರ್ ಬಗ್ಗೆ ಮಾತನಾಡಿದ್ದಕ್ಕೆ ಉರಿ ಹೊತ್ತಿಕೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ನೆಹರೂ ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ರವಿ ಹೇಳಿದ್ದು ತಪ್ಪೋ..? ರವಿ ಹೇಳಿದ್ದು ತಪ್ಪು ಎನ್ನುವುದಾದರೆ ಅವರಿಗೆ ನೆಹರೂ ಬಗ್ಗೆ ಇನ್ನೆಷ್ಟು ಆಕ್ರೋಶ ಇರಬಹುದು ಎಂದು ಸಿ.ಟಿ. ರವಿ ಕಾಂಗ್ರೆಸಿಗರ ಕಾಲೆಳೆದಿದ್ದಾರೆ.
ಇದನ್ನೂ ಓದಿ:ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?
ನೆಹರೂ, ಇಂದಿರಾ ಗಾಂಧಿ ಬಗ್ಗೆ ನಾನು ಮಾತನಾಡಿದ್ದು ತಪ್ಪು ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಅವರು ಇಂದಿರಾ ಗಾಂಧಿಯನ್ನು ಏನೆಂದು ಕರೆದಿದ್ದರು? ಆ ಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ. ನನಗೆ ಕುಡಿಯೋ ಅಭ್ಯಾಸ ಇಲ್ಲದಿದ್ದರೂ ಕುಡುಕನ ಪಟ್ಟ ಕಟ್ಟಿದ್ರು. ಆದರೆ, ದಿನಾ ಕುಡಿಯುವವರು ಅವರೇ. ನಾನು 5 ಗಂಟೆಗೆ ಎದ್ದು ಯೋಗ ಮಾಡಿ, ಇಡೀ ದಿನ ಸಕ್ರೀಯವಾಗಿ ಇರುತ್ತೇನೆ. ಅವರ ಹಳೇ ಕಥೆಗಳನ್ನು ಹೇಳಬೇಕಾ? ಎಂದಿರುವ ರವಿ, ನಾನು ಆರ್​ಎಸ್​ಎಸ್​ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದೂ ಹೇಳಿದ್ದಾರೆ.
ಹಾರ-ತುರಾಯಿ ಬದಲು ಪುಸ್ತಕ ಆಯ್ತು; ಇದೀಗ ಮತ್ತೊಂದು ಆದೇಶ ಹೊರಡಿಸಲು ಸಜ್ಜಾಗಿದ್ದಾರೆ ಸಿಎಂ ಬೊಮ್ಮಾಯಿ..

ಪ್ರಾಂಶುಪಾಲರ ಉಪಟಳ ಸಹಿಸಲಾಗುತ್ತಿಲ್ಲ ಎಂದು ಶಾಸಕರ ಕಾಲಿಗೆ ಬಿದ್ದ ಉಪನ್ಯಾಸಕ!

ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 9 =
Remember me
