ಬಿ.ಆರ್. ಲಕ್ಷ್ಮಣರಾವ್ ಪ್ರಸಿದ್ಧ ಕವಿನಾನು ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ್ದು ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ‘ನವ್ಯಕಾವ್ಯ’ವು ಪ್ರವರ್ಧಮಾನ ಸ್ಥಿತಿಯಲ್ಲಿದ್ದಾಗ. ಹೀಗಾಗಿ ಆಗಿನ ನನ್ನ ಪ್ರಾರಂಭಿಕ ಕವಿತೆಗಳ ಮೇಲೆ ಅಡಿಗರ ಪ್ರಭಾವ ಢಾಳಾಗಿ ಎದ್ದುತೋರುವಂತಿತ್ತು. ಆದರೆ ನನ್ನ ಮನೋಧರ್ಮ ಅಡಿಗರಿಗಿಂತಲೂ ನರಸಿಂಹಸ್ವಾಮಿಯವರಿಗೆ ಹೆಚ್ಚು ಹತ್ತಿರವೆಂಬುದು ನಂತರದಲ್ಲಿ ನನ್ನ ಅರಿವಿಗೆ ಬಂತು. ಅವರ ‘ಪರಕ್ಕಿಂತಲೂ ಇಹದ ಕಡೆಗಿನ ಸೆಳೆತ’, ‘ವಿಚಾರಕ್ಕಿಂತಲೂ ಭಾವಕ್ಕೆ ಕೊಟ್ಟ ಆದ್ಯತೆ’ ಮತ್ತು ‘ಸರಳತೆಯಲ್ಲಿನ ಗಹನತೆ’ ನನ್ನನ್ನು ಗಾಢವಾಗಿ ಪ್ರಭಾವಿಸಿದವು. ಜೊತೆಗೆ ಅವರ ಪ್ರೇಮಕವಿತೆಗಳು ಹಾಗೂ ಭಾವಗೀತೆಗಳು ಅವರನ್ನು ನನಗೆ ಇನ್ನಷ್ಟು ಹತ್ತಿರವಾಗಿಸಿದವು. ನಾನೂ ಸಹ ಭಾವಗೀತೆಗಳನ್ನು ಬರೆಯಲು, ಪ್ರೇಮಕವಿಯೆಂದು ಹೆಸರಾಗಲು ನನಗೆ ಪ್ರಮುಖ ಪ್ರೇರಣೆ ನರಸಿಂಹಸ್ವಾಮಿಯವರೇ. ಅವರ ಜನಬಳಕೆಯ ಸರಳ, ಧ್ವನಿಪೂರ್ಣ, ತಿಳಿಗನ್ನಡ ನನಗೆ ಮಾದರಿ. ಅವರ ಒಂದು ಕವನದ ಈ ಸಾಲುಗಳು ಇಂದಿಗೂ ನನಗೆ ತೋರುಗಂಬ.
ಶಿಕ್ಷಣ ಮಾಧ್ಯಮವಾದರೆ ಸಾಲದುಕನ್ನಡ ಮಕ್ಕಳಿಗೆ;ಕನ್ನಡ ಮಾಧ್ಯಮವಾಗಲೇ ಬೇಕುಮೊದಲೀ ಕವಿಗಳಿಗೆ,ಕನ್ನಡ ಕವಿಗಳಿಗೆ.
ಇಂದಿನ ದೃಶ್ಯ ಮಾಧ್ಯಮಗಳ ಕಲುಷಿತ ಕಲಬೆರಕೆಯ ಕನ್ನಡಕ್ಕೂ ಕೆ.ಎಸ್.ನ. ಅವರ ಈ ಮಾತುಗಳು ಅನ್ವಯಿಸುತ್ತವೆ. ಅಡಿಗರು ಬಹುಮಟ್ಟಿಗೆ ಲೋಕಾಂತದ ಕವಿ. ಅವರಿಗೆ ಜನ ಬೇಕು. ಅದರಲ್ಲೂ ಯುವಜನ. ಹೀಗಾಗಿ ನನಗೆ ಅವರೊಂದಿಗೆ ನಿರಂತರ ಒಡನಾಟವಿತ್ತು, ಆತ್ಮೀಯ ಸಲುಗೆಯಿತ್ತು. ಆದರೆ ನರಸಿಂಹಸ್ವಾಮಿಯವರು ಬಹುಮಟ್ಟಿಗೆ ಏಕಾಂತದ ಕವಿ. ಅಡಿಗರದ್ದು ಮುಂದಾಳುತನದ ಏರುಧ್ವನಿಯಾದರೆ ನರಸಿಂಹಸ್ವಾಮಿಯವರದ್ದು ಸಂಕೋಚದ ಮೆಲುಧ್ವನಿ. ಹೀಗಾಗಿ ಕೆ.ಎಸ್.ನ. ಅವರೊಂದಿಗೆ ನನ್ನ ಒಡನಾಟ ತೀರಾ ಕಡಿಮೆ. ಆದರೆ ಕಾವ್ಯದ ವಿಚಾರಕ್ಕೆ ಬಂದರೆ ನನಗೆ ಅಡಿಗರಿಗಿಂತ ನರಸಿಂಹಸ್ವಾಮಿಯವರೇ ಹೆಚ್ಚು ಪ್ರಿಯ. ಏಕೆಂದರೆ ಅಡಿಗರು ಪಂಪನ ಹಾಗೆ ‘ಕವಿಗಳ ಕವಿ’ಯಾದರೆ ನರಸಿಂಹಸ್ವಾಮಿಯವರು ಕುಮಾರವ್ಯಾಸನಂತೆ ‘ಜನರ ಕವಿ’. ಅಡಿಗರದ್ದು ಕಾವ್ಯದಲ್ಲಿ ಗಣಿಗಾರಿಕೆಯಾದರೆ ನರಸಿಂಹಸ್ವಾಮಿಯವರದ್ದು ವ್ಯವಸಾಯ. ಅಡಿಗರು ‘ನೆಲತಾಯಿ, ಮಲತಾಯಿ’ ಎಂದರೆ ನರಸಿಂಹಸ್ವಾಮಿಯವರು ‘ಮುನ್ನೀರ ಮೇಲೆ ಕಣ್ಣೀರ ಸುರಿವ ತಾಯೆ/ ನೀನಲ್ಲ ಮಾಯೆ’ ಅನ್ನುತ್ತಾರೆ. ಹೀಗಾಗಿ ಪಂಡಿತರಿಗಷ್ಟೇ ಅಲ್ಲದೆ ಪಾಮರರಿಗೂ ಪ್ರಿಯರಾದ ಕವಿಯಾಗಿದ್ದಾರೆ ಕೆ.ಎಸ್.ನ.
ಭೂಮಿಯ ಕರುಣೆಗೆ ಮಿತಿ ಇರದೆಂದು,ಎಲ್ಲರ ದುಡಿಮೆಗೆ ಫಲವಿಹುದೆಂದು,ನಾಳೆಯ ಬಾಗಿಲು ನಂದನವೆಂದು,ಪ್ರೀತಿಗೆ ಶಾಂತಿಗೆ ಜಯವಿರಲೆಂದುಎಲ್ಲರಿಗೊಳಿತನು ಬಯಸಲಿ ಕವನ.ಎಂದ, ಜನಪ್ರೀತಿಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಗೆ ಅವರ ಜನ್ಮದಿನದಂದು ನನ್ನ ಪ್ರೀತಿಯ ನುಡಿ ನಮಸ್ಕಾರಗಳು.
ಪದ್ಮಶ್ರೀ ಪ್ರಶಸ್ತಿ ಪ್ರಕಟ; ಕರ್ನಾಟಕದ ಪ್ರೇಮಾ, ಸೋಮಣ್ಣ ಪುರಸ್ಕಾರಕ್ಕೆ ಭಾಜನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
