ಮೈಸೂರು:ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ಅಸಹಾಯಕತೆ ವ್ಯಕ್ತಪಡಿಸಿರುವ ಆಡಿಯೋ ಇದೀಗ ವೈರಲ್ ಆಗಿದೆ. ರೋಗಿ ಸಂಬಂಧಿಕರ ಜತೆ ಮಾತನಾಡಿರುವ ಫೋನ್ ಸಂಭಾಷಣೆ ಇದಾಗಿದ್ದು, ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ ವ್ಯಕ್ತಿಗೆ ‘ವಾರ್ ರೂಮ್ೆ ಕರೆ ಮಾಡಿ ಅಲ್ಲಿ ಅರೇಂಜ್ ಮಾಡಿಕೊಡುತ್ತಾರೆ’ ಎಂದು ಡಾ.ಅಮರನಾಥ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ‘ಅವರು ಸ್ಪಂದಿಸುತ್ತಿಲ್ಲ’ ಎಂದು ರೋಗಿ ಸಂಬಂಧಿ ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್​ಒ, ‘ಬೆಡ್​ಗೂ, ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ. ನನ್ನ ಹೆಂಡತಿಗೂ ಬೆಡ್ ಕೊಡಿಸಲು ಆಗಿಲ್ಲ. ನನ್ನ ಕೈ ಸೋತೋಗಿದೆ’ ಎಂದು ಬೇಸರ ಹೊರಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡ ಕರೆ ಮಾಡಿದಾತ ‘ನಿಮಗೆ ಈ ಜವಾಬ್ದಾರಿ ಏಕೆ, ಕೆಲಸ ಬಿಟ್ಟೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಡಿಎಚ್​ಒ, ‘ಕೆಲಸದಿಂದ ಕಳುಹಿಸಿದರೆ ಬಿಟ್ಟೋಗಲು ರೆಡಿ ಇದ್ದೇನೆ. ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ, ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 2 =
Remember me
