ರಾಮನಗರ:ನಾನು ಸರ್ವೆ ಮಾಡಿಸಿದ್ದೇನೆ, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 140 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.
ಮಾಗಡಿಯಲ್ಲಿ ಇಂದು (ಮಾ.10) ನಡೆದ ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಡಿಕೆಶಿ, ನಾನು ಹೊರಗಡೆಯಿಂದ ಬಂದವನಲ್ಲ. ನಾನು‌ ಇದೇ ಜಿಲ್ಲೆಯ ಮಗ. ನಾನು ಸತ್ತರೆ ದೊಡ್ಡ ಆಲನಹಳ್ಳಿ ಮಣ್ಣಲ್ಲಿ ನನ್ನನ್ನು ಹೂಳ್ತಾರೆ. ನನ್ನನ್ನು ಬೇರೆ ಊರಿಗೆ ತೆಗೆದುಕೊಂಡು ಹೋಗಲ್ಲ. ನೀವು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಒಂದು ಅವಕಾಶ ಕೊಟ್ಟಿದ್ದೀರಿ, ಈ ಬಾರಿ ನಮಗೂ ಒಂದು ಅವಕಾಶ ಕೊಡಿ ಎಂದು ಕೇಳಿದರು.
ಇದನ್ನೂ ಓದಿ:ಪತಿಯ ಕಥೆ ಮುಗಿಸಿ ಮನೆಯಲ್ಲೇ ಶವ ಸುಡಲು ಯತ್ನಿಸಿದ ಮಹಿಳೆ ಅರೆಸ್ಟ್​!
ನಾನು ಈಗಾಗಲೇ ಸರ್ವೆ ಮಾಡಿಸಿದ್ದೇನೆ, ಈ ಬಾರಿ 140 ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲಲಿದೆ. ಸಾಕಷ್ಟು ಮಂದಿ ರಾಜಕಾರಣಿಗಳು ಕಾಂಗ್ರೆಸ್ ಸೇರ್ತಿದ್ದಾರೆ. ಶಿವಲಿಂಗೇಗೌಡ, ಮಧು ಬಂಗಾರಪ್ಪ, ಕೋಲಾರ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್, ಎಂಎಲ್​ಸಿ ಪುಟ್ಟಣ್ಣ ಹಾಗೂ ತೀರ್ಥಹಳ್ಳಿ ಮಂಜುನಾಥ್ ಸೇರಿ ಅನೇಕರು ಕಾಂಗ್ರೆಸ್ ಗೆ ಬರ್ತಿದ್ದಾರೆ ಎಂದರು.
ಇದೇ ವೇಳೆ ಕಾರ್ಯಕರ್ತನೊಬ್ಬ ಸೋಮಣ್ಣ ಎಂದು ಹೆಸರೇಳಿದರು, ಅದಕ್ಕೆ ಈಗ ಸೋಮಣ್ಣ ಅವರ ವಿಚಾರ ಬೇಡ ಎಂದು ಡಿಕೆಶಿ ಎಂದರು.(ಏಜೆನ್ಸೀಸ್​)
ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಒಯೊ ಸಂಸ್ಥಾಪಕ ರಿತೇಶ್​ ಅಗರ್ವಾಲ್​ಗೆ ಪಿತೃ ವಿಯೋಗ​

ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ?: ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
