ಬೆಂಗಳೂರು:ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರಿಗೂ ಕರೊನಾ ದೃಢಪಟ್ಟಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇತ್ತಿಚೆಗಷ್ಟೇ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದ ಸಚಿವ ರವಿ ಅವರ ತಪಾಸಣಾ ವರದಿ ನೆಗೆಟಿವ್​ ಎಂದು ಮೊನ್ನೆಯಷ್ಟೇ ಹೊರಬಿದ್ದಿತ್ತು.
ತಮ್ಮ ಕೊವಿಡ್​-19 ಟೆಸ್ಟ್​ ವರದಿಯ ಫೋಟೋವನ್ನು ಸಿ.ಟಿ.ರವಿ ಅವರೇ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಕರೊನಾ ವರದಿ ನೆಗೆಟಿವ್​ ಬಂದಿದೆ. ನಾನು ಎಂದಿನಂತೆ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಆದರೆ ಇಂದು ಸಿ.ಟಿ.ರವಿಯವರಲ್ಲಿ ಕರೊನಾ ದೃಢಪಟ್ಟ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಚಿವರು ಟ್ವೀಟ್​ ಮಾಡಿ, ನಾನು ಕ್ಷೇಮವಾಗಿದ್ದೇನೆ. ಕರೊನಾ ಲಕ್ಷಣಗಳು ಇಲ್ಲ. ಈಗ ಹೋಂ ಕ್ವಾರಂಟೈನ್​ನಲ್ಲಿದ್ದೇನೆ. ಸದ್ಯ ತೋಟದ ಮನೆಯಲ್ಲೇ ವಾಕ್​ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ತಮಗೆ ಕರೊನಾ ಸೋಂಕು ತಗುಲಿದೆ ಎಂಬುದನ್ನೇನೂ ಅವರು ಹೇಳಿಲ್ಲ.
ಜು.6ರಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಪ್ರಾಣೇಶ್​ ಜತೆ ಸಂಪರ್ಕದಲ್ಲಿದ್ದ ಇಬ್ಬರು ಬಿಜೆಪಿ ಮುಖಂಡರೊಂದಿಗೆ ಸಿ.ಟಿ.ರವಿಯವರೂ ಪ್ರಾಥಮಿಕ ಸಂಪರ್ಕಹೊಂದಿದ್ದರು. ಇನ್ನು ಕೊವಿಡ್​-19 ವ್ಯಾಪಕವಾಗಿ ಹರಡುತ್ತಿದ್ದರೂ ಸಿ.ಟಿ.ರವಿಯವರು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದರು.
ಎನ್​ಕೌಂಟರ್​ನಲ್ಲಿ ಸತ್ತ ವಿಕಾಸ್​ ದುಬೆಗೆ ಉತ್ತರ ಪ್ರದೇಶದಲ್ಲಿ ಇದೆಯಂತೆ 11 ಮನೆ, 16 ಫ್ಲ್ಯಾಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
