ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರಿಗೆ ಕರೊನಾ ಸೋಂಕು ತಗುಲಿದೆ. ಅವರೇ ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.
ನನ್ನ ಕರೊನಾ ಪರೀಕ್ಷಾ ವರದಿ ಪಾಸಿಟಿವ್​ ಎಂದು ಬಂದಿದೆ. ರೋಗ ಲಕ್ಷಣಗಳು ಇಲ್ಲದೆ ಹೋದರೂ ಮುನ್ನೆಚ್ಚರಿಕಾ ಕ್ರಮವಾಗಿ, ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್​-19 ಟೆಸ್ಟ್​ಗೆ ಒಳಗಾಗಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಷ್ಟೇ ಅಲ್ಲ ಈಗಲೇ ಕ್ವಾರಂಟೈನ್​ಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:ಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ
ಇತ್ತೀಚೆಗೆ ಸಿಎಂ ಕಚೇರಿ-ನಿವಾಸ ಸೇರಿ 7 ಜನರಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೂಡ ಒಂದು ವಾರ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದರು. ನಂತರ ಮಾಡಿದ ಕೊವಿಡ್​-19 ಟೆಸ್ಟ್ ವರದಿ ಜುಲೈ 18ರಂದು ಹೊರಬಿದ್ದಿತ್ತು. ಅದರಲ್ಲಿ ನೆಗೆಟಿವ್​ ಎಂದು ಹೇಳಲಾಗಿತ್ತು. ಆದರೆ ಈಗ ಮಾಡಿಸಿದ ಟೆಸ್ಟ್​ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
VIDEO: ಪಾಕಿಸ್ತಾನದ ಪ್ರಮುಖ ನ್ಯೂಸ್​ ಚಾನಲ್​ನಲ್ಲಿ ನಳನಳಿಸಿದ ಭಾರತದ ಧ್ವಜ; ವೀಕ್ಷಕರು, ಮಾಧ್ಯಮ ಸಿಬ್ಬಂದಿ ಶಾಕ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
