ಬೆಂಗಳೂರು:ನಾನು ಕೆಲ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಶಿಕ್ಷಕರ ಕಷ್ಟ ನನಗೆ ಗೊತ್ತಿದೆ. ನಾನು ಸಿಎಂ ಆಗಿದ್ದಾಗ ಶಿಕ್ಷಕರ ನೇಮಕದಲ್ಲಿ ಶೇ.50 ಮಹಿಳಾ ಮೀಸಲಾತಿ ತಂದು ಆ ವರ್ಷ 1.5 ಲಕ್ಷ ಮಹಿಳಾ ಶಿಕ್ಷಕರ ನೇಮಕ ಮಾಡಲಾಗಿತ್ತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ದಾಸರಹಳ್ಳಿಯ ಬಗಲಗುಂಟೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಎಸ್​ಎಸ್​ಎಲ್​ಸಿ ಮುಗಿಸಿದ ಮೇಲೆ ಶಿಕ್ಷಕನಾಗಿದ್ದೆ. ಅದನ್ನು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದೇನೆ. ಹಾಗಾಗಿ ನನಗೆ ಶಿಕ್ಷಕರ ಸಮಸ್ಯೆಗಳು ಗೊತ್ತು ಎಂದರು.
ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ಜೂನ್​ನಲ್ಲಿ ಚುನಾವಣೆ ನಡೆಯಲಿದ್ದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ದೇವೇಗೌಡರು ಚುನಾವಣಾ ಪ್ರಚಾರ ಆರಂಭಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಮಾರ್ಚ್ ನಲ್ಲಿ ಬಿಡುಗಡೆ ಆಗಲಿದೆ. ಅವರ ಆರಂಭಿಕ ಜೀವನ, ದನ ಮೇಯಿಸುತ್ತಿದ್ದ ದಿನದಿಂದ ಪ್ರಧಾನಿಯವರೆಗೂ ಅವರ ಜೀವನದ ಹಲವು ವಿಚಾರಗಳು ಆತ್ಮಚರಿತ್ರೆಯಲ್ಲಿರುತ್ತವೆ.
| ವೈ.ಎಸ್.ವಿ.ದತ್ತಮಾಜಿ ಶಾಸಕ
ರಾಜಕೀಯದಲ್ಲಿ 58 ವರ್ಷವಾಗಿದೆ. ಯಾವ ಸಿಎಂ ಹೇಗೆ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಐ ಆಮ್ ಎನ್ ಸೈಕ್ಲೋಪಿಡಿಯಾ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಈಗ ಚರ್ಚೆಯ ಅವಶ್ಯಕತೆ ಇಲ್ಲ. ಸನ್ನಿವೇಶ ಬಂದಾಗ ಮಾತನಾಡುತ್ತೇನೆ.
| ಎಚ್.ಡಿ.ದೇವೇಗೌಡಮಾಜಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
