ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಇದೇ ಮೊದಲ ಸಲ ಬೆಂಗಳೂರಿನ ಶಂಕರಪುರದಲ್ಲಿರುವ ಆರ್​ಎಸ್​ಎಸ್​ ಕಚೇರಿಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಅಲ್ಲಿ ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ ಮುಕುಂದ ಮತ್ತಿತರ ಮುಖಂಡರ ಜತೆ ಮಾತುಕತೆ ನಡೆಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ಹೊರಬಂದು ಸುದ್ದಿಗಾರರ ಜತೆ ಮಾತನಾಡಿದ ಬಿಎಸ್​ವೈ ಒಂದಷ್ಟು ವಿಷಯಗಳ ಕುರಿತ ಮಾಹಿತಿಯನ್ನು ಹೊರಬಿಟ್ಟರು. ಸಂಪುಟ ರಚನೆ ವೇಳೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ಅವರು, ವಲಸಿಗರ ಕುರಿತೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಹೊಸ ಸಿಎಂ ಹಿನ್ನೆಲೆಯಲ್ಲಿ ವಲಸಿಗರಿಗೆ ಆತಂಕ ಎದುರಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ವಲಸಿಗರ ವಿಷಯದಲ್ಲಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡುವೆ. ಸರ್ಕಾರ ರಚಿಸಲು ಕಾರಣಕರ್ತರಾದವರ ಕುರಿತು ಗಮನ ನೀಡುವಂತೆ ಹೇಳುವೆ ಎನ್ನುವ ಮೂಲಕ ವಲಸಿಗರಿಗೆ ಪರೋಕ್ಷವಾಗಿ ಅಭಯ ನೀಡಿದ್ದಾರೆ. ಇನ್ನು ಬೊಮ್ಮಾಯಿ ಸಂಪುಟವನ್ನು ಸೇರುವುದಿಲ್ಲ ಎಂದು ಶೆಟ್ಟರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಎಸ್​ವೈ, ಯುವಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಆ ನಿರ್ಧಾರ ತಳೆದಿರುವುದಾಗಿ ಶೆಟ್ಟರ್ ತಿಳಿಸಿದ್ದಾಗಿ ಹೇಳಿದರು.
ನಾಳೆ ದೆಹಲಿಗೆ ಸಿಎಂ- ಮಾಜಿ ಸಿಎಂ:ಇಂದು ದೆಹಲಿಗೆ ಹೋಗಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ, ನಾಳೆ ದೆಹಲಿಗೆ ತೆರಳಲಿದ್ದಾರೆ. ಹಾಗೆಯೇ ತಾವೂ ನಾಳೆ ದೆಹಲಿಗೆ ತೆರಳಲಿರುವುದಾಗಿ ಬಿಎಸ್​ವೈ ತಿಳಿಸಿದರು.
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಬಾಲಕಿಯರಿಬ್ಬರ ಮೇಲೆ ಗ್ಯಾಂಗ್​ರೇಪ್​: ರಾತ್ರಿ ಇಡೀ ಮಕ್ಕಳು ಹೊರಗಿದ್ದಾಗ ಮನೆಯವರು ಯಾಕೆ ಸುಮ್ಮನಿದ್ದರು ಎಂದ ಸಿಎಂ!

ಸುಮಾರು 5,500 ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಕೊಟ್ಟರು ಮೋದಿ: ಸ್ನಾತಕ-ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಮೀಸಲಾತಿ

Sign in to your account
Please enter an answer in digits:6 + 19 =
Remember me
