ಅಪ್ಪ ಎಂದರೆ ನೆನಪಾಗುವ ಮೊದಲನೆಯ ಪದ ಧೈರ್ಯ. ನಾನು ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ಚೆನ್ನಾಗಿಯೇ ಓದಿದ್ದೆ. ಪರೀಕ್ಷೆಯ ದಿನ ಬೆಳಗ್ಗೆಯಿಂದಲೂ ಜ್ವರದಿಂದ ಮೈಸುಡುತ್ತಿತ್ತು. ಮೈಮೇಲೆಲ್ಲಾ ಗುಳ್ಳೆಗಳು ಎದ್ದಿದ್ದವು. ಹೋಗಲು ಆಗದಂಥ ಪರಿಸ್ಥಿತಿ. ವರ್ಷ ಸುಮ್ಮನೆ ಹಾಳಾಯಿತು ಎಂದು ಆಳ್ತಾ ಇದ್ದೆ. ‘ನಾನು ಪರೀಕ್ಷೆಗೆ ಹೋಗಲ್ಲ. ಮೈಯೆಲ್ಲಾ ಗುಳ್ಳೆಗಳೆದ್ದಿವೆ’ ಎಂದಾಗ ಅಪ್ಪ, ‘ಇಷ್ಟು ಓದಿದ್ದಿ, ಸುಮ್ಮನೆ ಯಾಕೆ ಒಂದು ವರ್ಷ ಹಾಳು ಮಾಡುತ್ತಿ. ಏನೂ ಆಗಲ್ಲ ಪರೀಕ್ಷೆ ಎದುರಿಸು’ ಎಂದು ಧೈರ್ಯ ತುಂಬಿದರು. ಪರೀಕ್ಷೆ ನಡೆಯುವಲ್ಲಿ ಜತೆಗೇ ಬಂದು ಪರೀಕ್ಷೆ ಕೊಠಡಿಯ ಹೊರಗಡೆ ಪರೀಕ್ಷೆ ಮುಗಿಯುವತನಕ ಕುಳಿತರು. ಮಧ್ಯದಲ್ಲಿ ಪ್ಯೂನ್ ಕಡೆ ಹಣ್ಣಿನರಸ ಕಳಿಸುತ್ತಿದ್ದರು. ಕೊನೆಗೆ ಹೇಗೋ ಪರೀಕ್ಷೆ ಮುಗಿಸಿ ಅವರ ಜತೆ ಮನೆಗೆ ಬಂದೆ. ಮುಂದೆ ರಿಸಲ್ಟ್ ಬಂತು. ಫಸ್ಟ ಕ್ಲಾಸ್​ನಲ್ಲಿ ಪಾಸಾಗಿದ್ದೆ. ಅಂದು ಅಪ್ಪ ಧೈರ್ಯ ತುಂಬದಿದ್ದರೆ ಒಂದು ವರ್ಷ ಹಾಳಾಗುತ್ತಿತ್ತು. ಇಂದಿಗೂ ಅವರ ಧೈರ್ಯ, ಮಮತೆ ನೆನಪಾಗುತ್ತೆ.
| ಸವಿತಾ ಧೃವರಾವ್ ತೊರವಿ ಹುಬ್ಬಳ್ಳಿ
ಇಂದು ಅಪ್ಪನ ದಿನ: ಅಪ್ಪ ಇದ್ದಾರೆಂಬ ಭರವಸೆಯೇ ನನಗೆ ಶಕ್ತಿ, ಸ್ಫೂರ್ತಿ

ನನ್ನ ಪ್ರೀತಿಯ ಅಪ್ಪ ಹೆಣ್ಣುಮಗುವಿಗಾಗಿ ಹರಕೆ ಕಟ್ಟಿದ್ದ

ತಂದೆಯೇ ಗುರುವಾಗಿ ಲಭಿಸಿದ್ದು ನನ್ನ ಸುಕೃತ ಫಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
