ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಬೆನ್ನಲ್ಲೇ ಹಿರಿಯ ಐಎಎಸ್​ ಅಧಿಕಾರಿ ರಾಕೇಶ್​ ಸಿಂಗ್​ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಇಂದು (ಜೂ.8) ಆದೇಶ ಹೊರಡಿಸಿದೆ.
ರಾಕೇಶ್​ ಸಿಂಗ್​ ನೇಮಕ ಬೆನ್ನಲ್ಲೇ ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರು ಕಾಂಗ್ರೆಸ್​ ಶಾಸಕರಿಗೆ ಭಾರೀ ನಿರಾಸೆ ಆಗಿದೆ. ಶಾಂತಿನಗರದ ಕಾಂಗ್ರೆಸ್​ ಶಾಸಕ ಎನ್‌.ಎ. ಹ್ಯಾರಿಸ್ ಹಾಗೂ ಗೋವಿಂದರಾಜನಗರದ ಕಾಂಗ್ರೆಸ್​ ಶಾಸಕ ಪ್ರಿಯಾಕೃಷ್ಣ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇಬ್ಬರಿಗೂ ಸಚಿವ ಸ್ಥಾನ ಮಿಸ್ ಆದ ಹಿನ್ನಲೆಯಲ್ಲಿ ಬಿಡಿಎ ಸ್ಥಾನ ಪಡೆಯುವುದಕ್ಕಾಗಿ ತೀವ್ರ ಲಾಬಿ ನಡೆಸಿದ್ದರು. ಆದರೆ, ಅಂತಿಮವಾಗಿ ಸರ್ಕಾರ ಐಎಎಸ್​ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕುತೂಹಲಕ್ಕೆ ತೆರೆಎಳೆದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ
ಈ ಹಿಂದೆ ಪ್ರಿಯಾಕೃಷ್ಣ ಅವರು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದರು. ನಾನು ಗೋವಿಂದರಾಜನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಬಿಜಿಯಾಗಿದ್ದೇನೆ. ನಾನು ಯಾವುದೇ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದರು. ಆದರೂ, ಒಳಗೊಳಗೆ ಪ್ರಿಯಾಕೃಷ್ಣ ಲಾಬಿ ಮಾಡುತ್ತಿದ್ದಾರೆ ಎಂದು ತಿಳಿಬಂದಿತ್ತು. ಇದೀಗ ಬಿಡಿಎ ಸ್ಥಾನ ಮಿಸ್​ ಆಗಿರುವುದು ಪ್ರಿಯಾಕೃಷ್ಣ ಮತ್ತು ಹ್ಯಾರಿಸ್​ಗೆ ಬೇಸರ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
As I am totally involved in the comprehensive development of#Govindarajanagarconstituency, hence I am not aspiring for any post of Chairman to any board or Corporation.
Please don’t pay heed to any misinformation which is being circulated in some media which conveys otherwise.
— Priya Krishna (@Priyakrishna_K)June 5, 2023

ರಾಕೇಶ್​ ಸಿಂಗ್​ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾತ್ರವಲ್ಲದೆ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮತ್ತು ಈ ಕೆಳಕಂಡ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿಯೂ ನೇಮ ಮಾಡಲಾಗಿದೆ.1. ಆನೇಕಲ್ ಯೋಜನಾ ಪ್ರಾಧಿಕಾರ2. ಹೊಸಕೋಟೆ ಯೋಜನಾ ಪ್ರಾಧಿಕಾರ3. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ4. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ5. ಮಾಗಡಿ ಯೋಜನಾ ಪ್ರಾಧಿಕಾರ6. ಚನ್ನಪಟ್ಟಣ ಯೋಜನಾ ಪ್ರಾಧಿಕಾರ7. ಕನಕಪುರ ಯೋಜನಾ ಪ್ರಾಧಿಕಾರ8. ನೆಲಮಂಗಲ ಯೋಜನಾ ಪ್ರಾಧಿಕಾರ9. ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ10. ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರ

ತನಗಿಂತ 22 ವರ್ಷ ಹಿರಿಯ ನಟನೊಂದಿಗೆ ಡೇಟಿಂಗ್​: ಕಿಸ್ಸಿಂಗ್​ ಫೋಟೋ ಬಗ್ಗೆ ನಟಿ ಯಶಿಕಾ ಸ್ಪಷ್ಟನೆ

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಹೀಗಿರಲಿದೆ ನೋಡಿ! 2000 ರೂ. ಪಡೆಯಲು ಯಾವ ದಾಖಲೆ ಕೊಡಬೇಕು?

ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ? ಬೆಲೆ ಏರಿಕೆಗೆ ಪಟ್ಟು ಹಿಡಿದ ಒಕ್ಕೂಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 9 =
Remember me
