ಬೆಂಗಳೂರು:ಹಳೇ ವೈಮನಸ್ಯ ಮರೆತು ಜೆಡಿಎಸ್​ನತ್ತ ಹೊರಟುನಿಂತ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರನ್ನು ತಡೆದು ನಿಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಮುಂದಾಗಿದ್ದಾರೆ.
ಭಾನುವಾರ ಬೆನ್ಸನ್ ಟೌನ್​ನಲ್ಲಿರುವ ಇಬ್ರಾಹಿಂ ನಿವಾಸಕ್ಕೆ ಆಗಮಿಸಿದ್ದ ಡಿಕೆಶಿ, ಸುದೀರ್ಘ ಚರ್ಚೆ ನಡೆಸಿದರಲ್ಲದೆ ಜಿಡಿಎಸ್​ಗೆ ಭವಿಷ್ಯವಿಲ್ಲ, ಹೀಗಾಗಿ ಆ ಪಕ್ಷದ ನಾಯಕರು ನೀಡುವ ಆಮಿಷಕ್ಕೆ ಮರುಳಾಗಿ ಆತುರದ ನಿರ್ಧಾರ ಕೈಗೊಳ್ಳದೆ ಕಾಂಗ್ರೆಸ್​ನಲ್ಲೇ ಮುಂದುವರಿಯುವಂತೆ ಕೋರಿಕೊಂಡರೆಂದು ತಿಳಿದುಬಂದಿದೆ.
ಈ ಹಿಂದೆ ಜೆಡಿಎಸ್​ನಲ್ಲಿದ್ದ ಇಬ್ರಾಹಿಂ ಸಿದ್ದರಾಮಯ್ಯರನ್ನ ಬೆಂಬಲಿಸಿ ಕಾಂಗ್ರೆಸ್ ಸೇರಿದ್ದರು, 2018ರ ಚುನಾವಣೆಯಲ್ಲೂ ಅವರ ಪರವಾಗಿ ರಾಜ್ಯ ಸುತ್ತಿದ್ದರು. ವಿಧಾನಪರಿಷತ್ ಪ್ರತಿಪಕ್ಷ ಸ್ಥಾನದ ಆಯ್ಕೆ ಸಂದರ್ಭ ಸಿದ್ದರಾಮಯ್ಯ ತಮ್ಮ ಪರ ನಿಲ್ಲಲಿಲ್ಲ ಎಂದು ಮುನಿಸಿಕೊಂಡು ಕಾಂಗ್ರೆಸ್ ಸಂಬಂಧವನ್ನೇ ಕಡಿದುಕೊಳ್ಳಲು ನಿರ್ಧರಿಸಿದ್ದರೆನ್ನಲಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಬ್ರಾಹಿಂ ಭೇಟಿ ಮಾಡಿ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
