ಕೊಡಗು:ಐಸ್​ ಕ್ರೀಮ್​ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಐಸ್​ ಕ್ರೀಮ್​ ಬಲು ಪ್ರಿಯ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಸಾಕು ಐಸ್​ ಕ್ರೀಮ್​ಗೆ ಇನ್ನಿಲ್ಲದ ಬೇಡಿಕೆ. ಆದರೆ, ನೆಚ್ಚಿನ ಐಸ್​ ಕ್ರೀಮ್ ಸಿಕ್ಕಿತೆಂದು ಏಕಾಏಕಿ ಬಾಯಿಗೆ ಇಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿದರೆ ಒಳಿತು.
ಮಡಿಕೇರಿಯಲ್ಲಿ ಏನಾಗಿದೆ ಅಂದರೆ ಕುಲ್ಫಿ ಐಸ್​ ಕ್ರೀಮ್​ನಲ್ಲಿ ಹರಿತವಾದ ಬ್ಲೇಡ್​ ಒಂದು ಪತ್ತೆಯಾಗಿದೆ. ಅದು ಹೇಗೆ ಕುಲ್ಫಿಯೊಳಗೆ ಬಂದಿರಬಹುದು ಎಂದು ತಿಳಯುವ ಮುನ್ನ ಪ್ರಕರಣ ಹೇಗೆ ಬೆಳಕಿಗೆ ಬಂತು ಎಂಬುದನ್ನು ಮೊದಲು ತಿಳಿಯೋಣ.
ಅಂದಹಾಗೆ ಮಡಿಕೇರಿ ತಾಲೂಕಿನ ಆವಂದರೂ ಗ್ರಾಮದಲ್ಲಿ ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮವೆಂದರೆ ನೂರಾರು ಜನ ಸೇರುವುದು ಸಾಮಾನ್ಯ.​ ಜನರಿದ್ದ ಮೇಲೆ ವ್ಯಾಪಾರಕ್ಕಾಗಿ ಐಸ್​ ಕ್ರೀಮ್​ ಮಾರುವುದು ಸಾಮಾನ್ಯವೇ. ಅದರಂತೆಯೇ ಕುಲ್ಫಿ ಐಸ್​ ಕ್ರೀಮ್​ ಮಾರಾಟ ಮಾಡುತ್ತಿದ್ದ ವಾಹನವೊಂದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮಗೂ ಸೇರಿದಂತೆ ಮಕ್ಕಳಿಗೆಂದು ಐಸ್​ ಕ್ರೀಮ್​ ಕೊಂಡುಕೊಂಡಿದ್ದಾರೆ.
ಬಳಿಕ ಮನೆಗೆ ತೆರಳಿದ ಮಹಿಳೆ, ಮಕ್ಕಳಿಗೆ ಕುಲ್ಫಿಯನ್ನು ನೀಡಿ ತಾವು ತಿನ್ನಲು ಶುರು ಮಾಡಿದ್ದಾರೆ. ಅರ್ಧ ಕುಲ್ಫಿ ತಿನ್ನುತ್ತಲೇ ಮಹಿಳೆಗೆ ಶಾಕ್​ ಎದುರಾಗಿದೆ. ಕುಲ್ಫಿಯೊಳಗಿನ ಹರಿತವಾದ ಬ್ಲೇಡ್ ಮಹಿಳೆಯ ನಾಲಿಗೆಗೆ ತಾಗಿದೆ. ತಕ್ಷಣ ಕುಲ್ಫಿಯನ್ನು ಮಹಿಳೆ ಬೀಸಾಡಿದ್ದಾರೆ.
ಖಾಸಗಿ ತಿಂಡಿ ತಯಾರಿಕ ಘಟಕದಲ್ಲಿ ತಯಾರಿದ್ದ ಕುಲ್ಫಿಯನ್ನು ಮಹಿಳೆ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಐಸ್​ ಕ್ರೀಮ್​ ತಯಾರಿಸುವವರು ಬೇಜವಾಬ್ದಾರಿಯಿಂದ ಬ್ಲೇಡ್​ ಅಲ್ಲಿಯೇ ಬಿಟ್ಟಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್​ ಸಂಭವಿಸಬಹುದಾದ ದುರಂತದಿಂದ ಮಹಿಳೆ ಪಾರಾಗಿದ್ದಾರೆ. ಅಲ್ಲದೆ, ಅದಕ್ಕೆ ಸಂಬಂಧಪಟ್ಟ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದು, ವೈರಲ್​ ಆಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × one =
Remember me
