ಬೆಳಗಾವಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಇಂಟ್ರಾಮುರಲ್​ ಸಂಶೋಧನಾ ಪ್ರಾಜೆಕ್ಟ್​ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳನ್ನು ಸಂಪೂರ್ಣವಾಗಿ 2 ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪ್ರಾಜೆಕ್ಟ್​ ಅವಧಿ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಅವಧಿ ವಿಸ್ತರಿಸಬಹುದು.
ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ರಿಸರ್ಚ್​ ಅಸೋಸಿಯೇಟ್​- ಐ, ಸೀನಿಯರ್​ ರಿಸರ್ಚ್​ ಫೆಲೊ, ಟೆಕ್ನಿಷಿಯನ್​/ಫೀಲ್ಡ್​ ಅಸಿಸ್ಟೆಂಟ್​, ಲ್ಯಾಬ್​ ಟೆಕ್ನಿಷಿಯನ್​/ಎಕ್ಸ್​ ರೇ ಟೆಕ್ನಿಷಿಯನ್​ ಹುದ್ದೆಗಳು ಖಾಲಿಯಿದ್ದು, ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ/ಪಿಯುಸಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಲು ಅರ್ಹರು. 47,000 -17,000 ರೂ. ಮಾಸಿಕ ವೇತನದೊಂದಿಗೆ ಸಂಸ್ಥೆಯ ನಿಯಮಾನುಸಾರ ಇತರ ಭತ್ಯೆ ಇರಲಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಳಗಾವಿ ಅಥವಾ ಕಲಬುರಗಿ ಜಿಲ್ಲೆಗೆ ಪೋಸ್ಟ್​ ಮಾಡಲಾಗುವುದು. ನೇಮಕಾತಿಯು ಪ್ರಾಜೆಕ್ಟ್​ ಅವಶ್ಯಕತೆಯನ್ನು ಅವಲಂಬಿಸಿರುತ್ತದೆ. ಕನಿಷ್ಠ 28 ಹಾಗೂ ಗರಿಷ್ಠ 35 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಧಿಕೃತ ವೆಬ್​ಸೈಟ್​ನಿಂದ ಅರ್ಜಿ ನಮೂನೆ ಡೌನ್​ಲೋಡ್​ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ The Director,ICMR-National Institute of Traditional Medicine, Nehru Nagar, Belagavi-590010ಇಲ್ಲಿಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 21.12.2022ಅಧಿಸೂಚನೆಗೆ:https://bit.ly/3XRZQwDಮಾಹಿತಿಗಾಗಿ:https://icmrnitm.res.in/
ಹುಬ್ಬಳ್ಳಿ ಕಿಮ್ಸ್​ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ನೇರ ಸಂದರ್ಶನ ಮೂಲಕ ನೇಮಕಾತಿ

ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
