ಬೆಂಗಳೂರು:ಆಹಾರ ಪ್ರಿಯರಿಗೆ ಒಂದು ಬ್ಯಾಡ್​​​ ನ್ಯೂಸ್​​​. ಅತ್ಯಂತ ಜನಪ್ರಿಯ ಹಾಗೂ ಹಳೆಯ ರೆಸ್ಟೋರೆಂಟ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನ ಅಥವಾ NKB ಡಿಸೆಂಬರ್​ 6 ರಿಂದ ಬಂದ್​ ಆಗಲಿದೆ.
ಮಲ್ಲೇಶ್ವರಂನ ಸಂಪಿಗೆ ಥಿಯೇಟರ್​ ಎದುರುಗಡೆಯಿರುವ ನ್ಯೂ ಕೃಷ್ಣ ಭವನ, ಸಸ್ಯಹಾರಿ ಊಟಕ್ಕೆ ಹೆಚ್ಚು ಖ್ಯಾತಿ ಗಳಿಸಿತ್ತು. ಇಲ್ಲಿ ವಿಶೇಷವಾಗಿ ಬಾದಾಮ್​​​ ಹಲ್ವಾ, ಉಡುಪಿ ಬನ್ಸ್, ಸೇಲಂ ಸಾಂಬಾರ್ ವಡಾ, ಗ್ರೀನ್​ ಮಸಾಲೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳು ಸಿಕ್ಕಾಪಟ್ಟೆ ಫೇಮಸ್.
ಆದರೆ, ರೆಸ್ಟೋರೆಂಟ್ ಮುಂಭಾಗದಲ್ಲಿ ಹೋಟೆಲ್ ಕ್ಲೋಸ್ ಮಾಡುತ್ತಿರುವುದಾಗಿ ಬ್ಯಾನರ್ ಹಾಕಿರುವುದನ್ನು ನೋಡಿ ಗ್ರಾಹಕರಿಗೆ ಬೇಸರದ ಜತೆಗೆ ಶಾಕ್ ಕೂಡ ಆಗಿದೆ. ಸದ್ಯ ಹೋಟೆಲ್​​​ನಲ್ಲಿ 100 ಜನರು ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಈ ಮೊದಲೇ ಹೇಳಿದ ಹಾಗೆ ನ್ಯೂ ಕೃಷ್ಣ ಭವನವು ಅತ್ಯಂತ ಹಳೆಯ ಹೋಟೆಲ್. ಇದು 1954 ರಲ್ಲಿ ಪ್ರಾರಂಭವಾಯಿತು. ರಾಮಕೃಷ್ಣ ಪ್ರಭು ಅವರು ಸ್ಥಾಪಿಸಿದ ಈ ರೆಸ್ಟೋರೆಂಟ್ ಅನ್ನು ಅವರ ಮಗ ಸುಂದರ್ ಆರ್. ಪ್ರಭು ಅವರಿಗೆ ವರ್ಗಾಯಿಸಲಾಯಿತು. ಪ್ರಸ್ತುತ ಹೋಟೆಲ್ ಇವರ ಮಗ ಸುನಿಲ್ ಎಸ್. ಪ್ರಭು ಅವರ ಒಡೆತನದಲ್ಲಿದೆ.
ಬೆಂಗಳೂರು ಮಂದಿ ಮಾತ್ರವಲ್ಲದೆ ಹೊರಗಿನವರು ಸಹ ಇಲ್ಲಿಗೆ ಸಾಂಪ್ರದಾಯಿಕ ಉಡುಪಿ ಭಕ್ಷ್ಯಗಳು, ಕಾಫಿ, ಉತ್ತರ ಭಾರತದ ಅಡುಗೆ ಸವಿಯಲು ಇಲ್ಲಿಗೆ ಬರುತ್ತಿದ್ದರು.
ಆದರೆ ಜನರು ಹೆಚ್ಚು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಶೀಘ್ರದಲ್ಲೇ ಹೋಟೆಲ್​​​ ಅದು ಈಗಿರುವುದಕ್ಕಿಂತ ಸಂಪೂರ್ಣ ಹೊಸದಾಗಿ ಬರಲಿದೆ ಎಂದು ಮಾಲೀಕರ ಆಪ್ತ ಮೂಲಗಳು ತಿಳಿಸಿವೆ. ಇನ್ನು ಭೀಮಾ ಜ್ಯುವೆಲರ್ಸ್​ಗೆ ಈ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಹೋಟೆಲ್​​​​​ನ ಮತ್ತೊಂದು ವಿಶೇಷವೆಂದರೆ ಪ್ರತಿ ದಿನವೂ ಪ್ರತ್ಯೇಕವಾದ ಕಸವನ್ನು ಹಂದಿ ಸಾಕಾಣಿಕೆ ಮಾಡುವವರಿಗೆ ಕಳುಹಿಸುವ ಮೂಲಕ ಶೂನ್ಯ ತ್ಯಾಜ್ಯ ನೀತಿಯನ್ನು ಅಳವಡಿಸಿಕೊಂಡ ಹಳೆಯ ರೆಸ್ಟೋರೆಂಟ್​ಗಳಲ್ಲಿ ಇದು ಕೂಡ ಒಂದಾಗಿದೆ.

ಈ ಪ್ರಮುಖ ಕಾರಣಗಳಿಗೆ ಭಾರತದಲ್ಲಿ ಕ್ಯಾನ್ಸರ್​​​​ನಿಂದ 2020 ರಲ್ಲಿ 2.25 ಲಕ್ಷ ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
