ಹುಬ್ಬಳ್ಳಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂಬರ್ 1 ದಿನಪತ್ರಿಕೆ ‘ವಿಜಯವಾಣಿ‘ ಮತ್ತು ‘ದಿಗ್ವಿಜಯ’ ನ್ಯೂಸ್ವತಿಯಿಂದ ‘ಆದರ್ಶ ದಂಪತಿ- ಬಲು ಅಪರೂಪ ನಮ್ಮ ಜೋಡಿ’ ಎಂಬ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆ ಮಹಿಳೆ ಇರುತ್ತಾಳೆ. ಈ ಸಾಧನೆಯನ್ನು ಸಾದರಪಡಿಸಲು ವಿನೂತನವಾಗಿ ವೇದಿಕೆ ಕಲ್ಪಿಸಿಕೊಡುವುದು ಈ ಸ್ಪರ್ಧೆಯ ಉದ್ದೇಶ. ವಿವಾಹ ವಾರ್ಷಿಕೋತ್ಸವವು ಸತಿ-ಪತಿಗೆ ಅಪರೂಪದ ಕ್ಷಣವಾಗಿರುತ್ತದೆ. ಈ ಸಂದರ್ಭವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಮಹಿಳಾ ದಿನಾಚರಣೆ ವೇಳೆಯಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ನಿಯಮಗಳು ಮುಂದಿನಂತಿವೆ…* ಮದುವೆಯಾಗಿ 20, 30, 40, 50 ವರ್ಷ ಪೂರೈಸಿದ ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕ ಇರುವುದಿಲ್ಲ.* ಜೀವನದಲ್ಲಿ ಅನುಭವಿಸಿದ ಕಷ್ಟ-ಸುಖದ ಸವಿ ನೆನಪುಗಳನ್ನು ಒಂದೂವರೆ ನಿಮಿಷದಲ್ಲಿ (90 ಸೆಕೆಂಡ್) ಸೂಕ್ತ ಕನ್ನಡ ಚಿತ್ರಗೀತೆಗಳುಳ್ಳ ವಿಡಿಯೋ ಚಿತ್ರೀಕರಣ ಮಾಡಿ ನಮಗೆ ಕಳುಹಿಸಿ.*ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.* ವಿಜಯವಾಣಿ ಮತ್ತು ದಿಗ್ವಿಜಯ ವತಿಯಿಂದ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಯ್ದ ವಿಡಿಯೋಗಳನ್ನು ಪ್ರಸಾರ ಮಾಡಲಾಗುವುದು.* ಅತ್ಯಂತ ಸುಂದರವಾಗಿ ಮೂಡಿಬಂದ ವಿಡಿಯೋಗಳನ್ನು ತೀರ್ಪುಗಾರರು ಆಯ್ಕೆ ಮಾಡುವರು. ಆಯ್ಕೆಯಾದ ವಿಡಿಯೋಗಳಿಗೆ ಪ್ರೀತಿಯ ಕಾಣಿಕೆ ನೀಡಿ ದಂಪತಿಯನ್ನು ಸನ್ಮಾನಿಸಲಾಗುವುದು.* ವಿಡಿಯೋ ಕ್ಲಿಪಿಂಗ್‌ನೊಂದಿಗೆ ದಂಪತಿ ಹೆಸರು, ವಿಳಾಸ, ಎಷ್ಟು ವರ್ಷದ ವಿಭಾಗ ಎಂಬ ಮಾಹಿತಿಯನ್ನು ಟೈಪ್ ಮಾಡಿ ವಾಟ್ಯಾಪ್ ಮಾಡಿರಬೇಕು. ವಿಡಿಯೋ ಕಳುಹಿಸಲು ಕೊನೆಯ ದಿನ ಮಾರ್ಚ್ 4. ಷರತ್ತು ಅನ್ವಯ.
ವಿಡಿಯೋ ಹೇಗಿರಬೇಕು ಎಂಬ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿದೆ


ಚುನಾವಣೋತ್ತರ ಸಮೀಕ್ಷೆ: ತ್ರಿಪುರಾ, ನಾಗಾಲ್ಯಾಂಡ್​ನಲ್ಲಿ ಬಿಜೆಪಿ, ಮೇಘಾಲಯ ಅತಂತ್ರ

ಭಾರತೀಯರ ಈ ಒಂದು ಸಹಾಯವನ್ನು ಎಂದಿಗೂ ಮರೆಯಲ್ಲ: ಪತ್ನಿ ನೆನೆದು ಹಳೇ ಘಟನೆ ಬಿಚ್ಚಿಟ್ಟ ವಾಸಿಂ ಅಕ್ರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
