
2.ವ್ಯಾಯಾಮ:ಒಂದೆರಡು ತಲೆಮಾರುಗಳ ಹಿಂದಿನವರಿಗೆ ಇರದಿದ್ದ ಕಾಯಿಲೆಗಳೆಲ್ಲ ನಮ್ಮನ್ನೇಕೆ ಕಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೂ ಅವರಿಗೂ ದೈಹಿಕ ವ್ಯಾಯಾಮದಲ್ಲಿರುವ ಅಗಾಧ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ವ್ಯಾಯಾಮದಿಂದ ಸಿಗುವ ರೋಗ ನಿರೋಧಕ ಶಕ್ತಿಯನ್ನು ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯೋಗಾಸನ, ಪ್ರಾಣಾಯಾಮ, ನಡಿಗೆ ಮುಂತಾದವುಗಳನ್ನು ನಿತ್ಯವೂ ಮಾಡುವುದು ಇಮ್ಯುನಿಟಿ ಹೆಚ್ಚಾಗಲು ಅತ್ಯಂತ ಅವಶ್ಯವಾದದ್ದು.
3.ದಿನಚರಿ:ಶಿಸ್ತಿಲ್ಲದ ದಿನಚರಿಯಿಂದ ನಮಗೇ ಗೊತ್ತಿಲ್ಲದೇ ನಮ್ಮ ರೋಗ ನಿರೋಧಕ ಶಕ್ತಿ ತುಸುತುಸುವಾಗಿ ನಾಶವಾಗುತ್ತ ಹೋಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಹಿಡಿದು ರಾತ್ರಿ ಬೇಗ ಮಲಗುವವರೆಗೆ ಎಲ್ಲಾ ರೀತಿಯ ದಿನಚರಿಗಳನ್ನು ಸರಿಯಾಗಿ ಪಾಲಿಸುವವನಿಗೆ ಸುಲಭವಾಗಿ ರೋಗ ಬಾರದೆಂದು ಆಯುರ್ವೆದ ಹೇಳುತ್ತದೆ. ಗಂಡೂಷ (ಆಯಿಲ್ ಪುಲ್ಲಿಂಗ್), ಅಭ್ಯಂಗ (ಎಣ್ಣೆ ಸ್ನಾನ), ಧ್ಯಾನ, ನಿಗದಿತ ಸಮಯದಲ್ಲಿ ಆಹಾರ ಸೇವನೆ, ಮಲಮೂತ್ರಾದಿ ಪ್ರಕೃತಿಯ ಕರೆಗಳನ್ನು ತಡೆಯದೇ ಇರುವುದು, ಇವನ್ನೆಲ್ಲ ಸರಿಯಾಗಿ ಪಾಲಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿರುವ ವಿಷಯ.
4.ಮನಸ್ಸು:ದೇಹದ ನೂರು ಪಟ್ಟು ಶಕ್ತಿಯುತವಾದದ್ದು ಮನಸ್ಸು. ಭಯ, ಚಿಂತೆ, ಅಸೂಯೆ ಇಂತಹ ಋಣಾತ್ಮಕ ಶಕ್ತಿಗಳು ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ಸಾಂಕ್ರಾಮಿಕ ರೋಗಗಳು ಹರಡಿದಾಗ ಭಯವು ಇಮ್ಯುನಿಟಿಯನ್ನು ಕಡಿಮೆಗೊಳಿಸಿ ಹೆಚ್ಚೆಚ್ಚು ಜನರು ಸಮಸ್ಯೆಗೆ ಒಳಗಾಗುತ್ತಾರೆ ಎಂಬುದು ಸಾಬೀತಾಗಿದೆ. ಹಾಗಾಗಿ ಸಾಧ್ಯವಾದಷ್ಟು ಪ್ರೀತಿ, ತೃಪ್ತಿ, ಶಾಂತ ಮನಸ್ಥಿತಿಯನ್ನು ತಂದುಕೊಳ್ಳಬೇಕಾಗಿದೆ.
5.ಚಟರಹಿತ ಜೀವನಶೈಲಿ:ಉತ್ತಮ ಗುಣಗಳನ್ನು ಹೊಂದಿರುವ ಆಹಾರಗಳು ಚಟವಾಗುವುದಿಲ್ಲ. ಒಂದು ದಿನ ಬಿಟ್ಟರೆ ತಳಮಳ ಅಥವಾ ವಿಚಿತ್ರ ಸಮಸ್ಯೆಗಳೇನೂ ಆಗುವುದಿಲ್ಲ. ಆದರೆ ವಿಷವನ್ನು ಹೊಂದಿದ ಆಹಾರ ಪದಾರ್ಥಗಳ ಸೇವನೆ ರೂಢಿಯಾದರೆ ಬಿಡುವುದು ಕಷ್ಟವಾಗುತ್ತದೆ. ಹಾಗಾಗಿಯೇ ತಂಬಾಕು, ಮದ್ಯಗಳಂತಹವು ಚಟವಾಗುವುದು. ಈ ವಿಷದ್ರವ್ಯಗಳ ಸೇವನೆಯಿಂದ ದೇಹದಲ್ಲಿರುವ ಓಜಸ್ಸು ಕ್ಷೀಣವಾಗಿ ರೋಗ ನಿರೋಧಕ ಶಕ್ತಿ ನಾಶವಾಗಿ ಹೋಗುತ್ತದೆ ಎನ್ನುತ್ತದೆ ಆಯುರ್ವೆದ. ಹಾಗಾಗಿ ಇವುಗಳನ್ನು ತ್ಯಜಿಸಬೇಕಾದ್ದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ವೈರಸ್ ಅಥವಾ ಫಂಗಸ್​ಗಳಷ್ಟೇ ಅಲ್ಲ ಎಲ್ಲಾ ರೀತಿಯ ಕಾಯಿಲೆಗಳೂ ನಮ್ಮನ್ನು ಕಾಡುತ್ತವೆ.
ಅಡುಗೆ ಮನೆವರೆಗೆ ಹಿಂಬಾಲಿಸಿಕೊಂಡು ಬಂದು ವೃದ್ಧೆಯ ಸರ ಎಗರಿಸಿದ ಕಳ್ಳ!

ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಅಣ್ಣ-ತಂಗಿ ಜತೆಗೆ 3 ವರ್ಷದ ಮಗುವೂ ಸ್ಥಳದಲ್ಲೇ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
