ನವದೆಹಲಿ:ಇಡ್ಲಿ, ಮಸಾಲೆ ದೋಸೆಯಿಂದ ಜೀವವೈವಿಧ್ಯಕ್ಕೆ ಗಂಡಾಂತರ ಎದುರಾಗಿದೆಯಂತೆ! ಅದರಲ್ಲೂ ಇಡ್ಲಿಯಿಂದ ಸ್ವಲ್ಪ ಹೆಚ್ಚೇ ಹಾನಿಯಾಗುತ್ತಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಜನಪ್ರಿಯ 151 ಖಾದ್ಯಗಳ ಜೀವವೈವಿಧ್ಯದ ಹೆಜ್ಜೆಗುರುತುಗಳನ್ನು (ಬಯೋಡೈವರ್ಸಿಟಿ ಫೂಟ್ ಪ್ರಿಂಟ್ಸ್) ಲೆಕ್ಕ ಹಾಕಲಾಗಿದ್ದು, ಅದರಲ್ಲಿ ಇಡ್ಲಿಗೆ 6ನೇ ಸ್ಥಾನವಿದ್ದರೆ, ದೋಸೆಗೆ 103ನೇ ಸ್ಥಾನ ದೊರೆತಿದೆ. ಇನ್ನುಳಿದಂತೆ, ಉತ್ತರಭಾರತದ ಚನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಪೇಜಿಗಳು ಜೀವವೈವಿಧ್ಯತೆಗೆ ಹೆಚ್ಚು ಹಾನಿಯನ್ನುಂಟು ಮಾಡುವ ಟಾಪ್ 25 ಆಹಾರದಲ್ಲಿ ಸೇರಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ ಅಧ್ಯಯನ
ವಿಶೇಷವೆಂದರೆ ಈ ಪಟ್ಟಿಯಲ್ಲಿ ಫ್ರೆಂಚ್ ಫ್ರೈ ಕೊನೆಯ ಸ್ಥಾನದಲ್ಲಿದೆ. ಸ್ಪೇನ್​ನ ರೋಸ್ಟ್ ಲ್ಯಾಂಬ್ ರೆಸಿಪಿಯಾದ ಲೆಚಾಜೊ ಅತ್ಯಧಿಕ ಪ್ರಮಾಣದಲ್ಲಿ ಜೀವವೈವಿಧ್ಯಕ್ಕೆ ಹಾನಿ ಮಾಡುತ್ತದೆ. ನಂತರ ಬ್ರೆಜಿಲ್​ನ ಗೋಮಾಂಸದ ನಾಲ್ಕು ಬಗೆಯ ಆಹಾರ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಈ ಪಟ್ಟಿಯಲ್ಲಿ ಇಡ್ಲಿ ಆರನೇ ಸ್ಥಾನದಲ್ಲಿದ್ದರೆ, ರಾಜ್ಮಾ ಏಳನೇ ಸ್ಥಾನದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಮಾಂಸವನ್ನು ಒಳಗೊಂಡಿರುವ ಆಹಾರ ಜೀವವೈವಿಧ್ಯಕ್ಕೆ ಧಕ್ಕೆ ತರುತ್ತವೆ ಎಂದು ಭಾವಿಸಲಾಗುತ್ತದೆ. ಆದರೆ, ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಮುಖ್ಯ ಪದಾರ್ಥಗಳಾಗಿ ಹೊಂದಿರುವ ಭಕ್ಷ್ಯಗಳು ಸಹ ಹೆಚ್ಚಿನ ಹಾನಿ ಉಂಟುಮಾಡುತ್ತವೆ ಎಂದು ಸಂಶೋಧನೆಯಲ್ಲಿ ಕಂಡುಬಂದಿರುವುದು ಆಶ್ಚರ್ಯಕರವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಭಾರತದಲ್ಲಿ ದ್ವಿದಳ ಧಾನ್ಯಗಳು ಮತ್ತು ಅಕ್ಕಿ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಜೈವಿಕ ವಿಜ್ಞಾನಗಳ ಸಹ ಪ್ರಾಧ್ಯಾಪಕ ಲೂಯಿಸ್ ರೊಮನ್ ಕರಾಸ್ಕೊ ತಿಳಿಸಿದ್ದಾರೆ.
ಅಧ್ಯಯನ ಹೇಗೆ?
ಕರಾಸ್ಕೊ ಮತ್ತು ಅವರ ಸಹೋದ್ಯೋಗಿಗಳು ಎಲ್ಲ 151 ಭಕ್ಷ್ಯಗಳಿಗೆ ಜೀವವೈವಿಧ್ಯದ ಹೆಜ್ಜೆಗುರುತುಗಳನ್ನು ಅಧ್ಯಯನ ಮಾಡಿದ್ದಾರೆ. ಪ್ರತಿ ಪದಾರ್ಥಕ್ಕೆ ಬೆಳೆಯಲು ಬೇಕಾಗುವ ಭೂಮಿ, ಅಲ್ಲಿರುವ ಕಾಡು ಸಸ್ತನಿಗಳು, ಪಕ್ಷಿಗಳು ಮತ್ತು ಉಭಯಚರಗಳ ಜೀವಿಗಳ ಮೇಲೆ ಸಂಭವನೀಯ ಪ್ರಭಾವವನ್ನು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಕೃಷಿಯನ್ನು ವಿಸ್ತರಿಸುವುದರಿಂದ ಉಂಟಾಗುವ ಆವಾಸ ಸ್ಥಾನಗಳ ನಷ್ಟದಿಂದ ಜೀವವೈವಿಧ್ಯತೆಯ ನಷ್ಟ ಉಂಟಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
