ಚಿಕ್ಕಮಗಳೂರು:ಶೃಂಗೇರಿ ಮಠದಿಂದ ಕಾಶ್ಮೀರದ ನೀಲಂಕಣಿವೆಯ ತೀತ್ವಾಲ್​ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಶಾರದಾ ಪೀಠಕ್ಕೆ ಶಾರದೆಯ ವಿಗ್ರಹ ಹಸ್ತಾಂತರಿಸಲಾಗಿದೆ.
ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಂದ ನೂತನ ವಿಗ್ರಹಕ್ಕೆ ವಿಜಯದಶಮಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಾಶ್ಮೀರಿ ಪಂಡಿತರ ಮೂಲಕ ಶಾರದಾಂಬೆಯ ವಿಗ್ರಹವನ್ನು ಹಸ್ತಾಂತರ ಮಾಡಲಾಯಿತು.
ಶಂಕರಾಚಾರ್ಯರು ಸರ್ವಜ್ಞ ಪೀಠಾರೋಹಣ ಮಾಡಿದ ಸ್ಥಳ ಕಾಶ್ಮೀರ. ಕಾಶ್ಮೀರದ ತೀತ್ವಾಲ್​ನಲ್ಲಿ ಶ್ರೀ ಶಾರದಾ ಪೀಠ ನಿರ್ಮಾಣ ಹಂತದಲ್ಲಿದೆ. ಇದೀಗ ಶೃಂಗೇರಿ ಮಠದಲ್ಲಿ ಮಾಡಲಾದ ಪಂಚಲೋಹದ ಶಾರದಾಂಬೆಯ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
ಮುಂದಿನ ವರ್ಷ ಸಂಕ್ರಾತಿಯ ನಂತರ ಉತ್ತರಾಯಣ ವೇಳೆ ತೀತ್ವಾಲ್​ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಶ್ರೀ ಶಾರದಾ ಪೀಠದಲ್ಲಿ ಪಂಚಲೋಹದ ಶಾರದಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
