|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕರೊನಾ ಒಂದು ಹಾಗೂ ಎರಡನೇ ಅಲೆ ಆರ್ಭಟಕ್ಕೆ ಹೈರಾಣಾಗಿರುವ ರಾಜ್ಯಕ್ಕೀಗ ಮೂರನೇ ಅಲೆಯ ಭೀತಿ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಈಗಿನ ಆರ್ಥಿಕ ಕಷ್ಟಕ್ಕೆ ಕೇಂದ್ರ ಸರ್ಕಾರ ಹೆಗಲು ನೀಡಿದರಷ್ಟೆ ರಾಜ್ಯದಲ್ಲಿ ಅಭಿವೃದ್ಧಿಕಾರ್ಯ ಸಾಧ್ಯ ಎನ್ನುವ ಸ್ಥಿತಿ ನಿರ್ವಣವಾಗಿದೆ.
ಈ ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕ ಮುಗಿದಿದೆ. ಅಬಕಾರಿ ಬಿಟ್ಟು ಉಳಿದ ವಲಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹಣೆಯಾಗಿಲ್ಲ. ಕಳೆದ ವರ್ಷ ಹುಡುಕಿದ ಪರ್ಯಾಯ ಮೂಲಗಳೂ ಫಲ ನೀಡಿಲ್ಲ. ಆದ್ದರಿಂದ ಸರ್ಕಾರ ಕೇಂದ್ರದಿಂದ ಬರಬೇಕಾಗಿರುವ ಸುಮಾರು 32 ಸಾವಿರ ಕೋಟಿ ರೂ.ಗಳ ಕಡೆ ಆಸೆಗಣ್ಣಿನಿಂದ ನೋಡುತ್ತಿದೆ. ಜತೆಗೆ ಬೇರೆ ಮೂಲಗಳ ಹುಡುಕಾಟವನ್ನೂ ಆರಂಭಿಸಿದೆ.
ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 6500 ಕೋಟಿ ರೂ. ತೆರಿಗೆ ಸಂಗ್ರಹ ಆಗಬೇಕು. ಆದರೆ ಮೇನಲ್ಲಿ ಪೆಟ್ರೋಲ್​ನಿಂದ 600 ಕೋಟಿ ರೂ. ಸೇರಿ 2768 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಅಬಕಾರಿಯಲ್ಲಿ 2277 ಕೋಟಿ ರೂ. ಸಂಗ್ರಹ ವಾಗಿದ್ದರೆ, ನೋಂದಣಿ ಮತ್ತು ಮುದ್ರಾಂಕದಲ್ಲಿ 632 ಕೋಟಿ ರೂ. ಆಗಿದೆ. ಇದರ ಪರಿಣಾಮ ವರ್ಷದ ಕೊನೆಗೆ ಇದ್ದೇ ಇರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಎಷ್ಟು ಕೊರತೆ ಸಾಧ್ಯತೆ?:ಮೊದಲ 3 ತ್ರೖೆಮಾಸಿಕದಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ. ಈಗ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದರೂ ಸುಧಾರಣೆಗೆ 6-7 ತಿಂಗಳು ಬೇಕಾಗುತ್ತದೆ. ಈ ಲೆಕ್ಕದಲ್ಲಿ ಬಜೆಟ್​ನ ಆದಾಯ ಸಂಗ್ರಹಣೆ ಗುರಿಯಲ್ಲಿ ಸುಮಾರು 20 ಸಾವಿರ ಕೋಟಿ ರೂ. ಕೊರತೆಯಾಗಬಹುದೆಂಬುದು ಹಣಕಾಸು ಇಲಾಖೆಯ ಅಂದಾಜು. ಈ ಸಾಲಿನಲ್ಲಿ ಸರ್ಕಾರ 1,11,494 ಕೋಟಿ ರೂ.ಗಳನ್ನು ಸ್ವಂತ ಸಂಪನ್ಮೂಲಗಳಿಂದ ಸಂಗ್ರಹಿಸಬೇಕಿದೆ. ಇದರ ಜತೆಗೆ 8288 ಕೋಟಿ ರೂ. ತೆರಿಗೆಯೇತರ ಆದಾಯವನ್ನು ಬೊಕ್ಕಸಕ್ಕೆ ತರಬೇಕಾಗಿದೆ. ಆದರೆ ಈ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ. ಮೊದಲ ತ್ರೖೆಮಾಸಿಕದಲ್ಲಿ ಸುಮಾರು 10 ಸಾವಿರ ಕೋಟಿ ರೂ. ನಷ್ಟವಾಗಿದ್ದರೂ ಮುಂದಿನ ದಿನಗಳಲ್ಲಿ ಸ್ವಲ್ಪ ವಹಿವಾಟು ಚೇತರಿಸಿಕೊಳ್ಳುತ್ತದೆ. ಆದರೂ ವಾರ್ಷಿಕವಾಗಿ ನಿರೀಕ್ಷಿತ ಗುರಿ ತಲುಪುವುದು ಸಾಧ್ಯವಾಗುವುದಿಲ್ಲವೆಂದು ಹೇಳಲಾಗುತ್ತಿದೆ.
ಯಾವ ಇಲಾಖೆಗೆ ಕಡಿತ?:ಹೆಚ್ಚಿನ ಅನುದಾನ ನಿಗದಿಯಾಗಿರುವ ಶಿಕ್ಷಣ, ನೀರಾವರಿ, ಕೃಷಿ, ಸಮಾಜ ಕಲ್ಯಾಣ, ಸಾರಿಗೆ, ವಿದ್ಯುತ್, ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ, ಪೊಲೀಸ್ ಇಲಾಖೆಗಳ ಅನುದಾನ ಕಡಿತವಾಗುವ ಸಾಧ್ಯತೆಗಳಿವೆ.
ಕಡಿಮೆ ಅಂದಾಜು:ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು ಹಾಗೂ ಸಹಾಯಧನ ಕಳೆದ ಹಣಕಾಸು ವರ್ಷಕ್ಕಿಂತ 7642 ಕೋಟಿ ರೂ. ಕಡಿಮೆ ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ಪಾಲು 28,591 ಕೋಟಿ ರೂ. ಮಾಡಿದ್ದರೆ, ಈ ಹಣಕಾಸು ವರ್ಷದಲ್ಲಿ 24,273 ಕೋಟಿ ರೂ. ಮಾಡಲಾಗಿದೆ. ಸಹಾಯಧನ ಕಳೆದ ವರ್ಷ 31,570 ಕೋಟಿ ರೂ. ಇದ್ದದ್ದು ಈ ವರ್ಷ 28,246 ಕೋಟಿ ರೂ.ಗೆ ಇಳಿಸಲಾಗಿದೆ. ಕೇಂದ್ರ ಕಳೆದ ವರ್ಷವೂ ನಿರೀಕ್ಷೆಯಷ್ಟು ತುಂಬಿಕೊಟ್ಟಿರಲಿಲ್ಲ. ಕರೊನಾ ಹಿನ್ನೆಲೆಯಲ್ಲಿ ಈ ವರ್ಷದ ಶೇ.30 ಕಡಿಮೆಯಾಗಬಹುದೆಂಬ ನಿರೀಕ್ಷೆ ಇದೆ.
ಕೇಂದ್ರದಿಂದ ನಿರೀಕ್ಷೆ ಎಷ್ಟು?:ಜಿಎಸ್​ಟಿ ಪರಿಹಾರ ಕಳೆದ ವರ್ಷದ ಬಾಕಿ ಸುಮಾರು 12 ಸಾವಿರ ಕೋಟಿ ರೂ., ಈ ವರ್ಷದ್ದು 18 ಸಾವಿರ ಕೋಟಿ ರೂ. ಸೇರಿ ಒಟ್ಟಾರೆ ಸುಮಾರು 32 ಸಾವಿರ ಕೋಟಿ ರೂ. ಬರಬೇಕಿದೆ. ಕಳೆದ ವರ್ಷದ ಬಾಕಿಯನ್ನು ಬಿಡುಗಡೆ ಮಾಡುವಂತೆ ರಾಜ್ಯ ನಿರಂತರ ಒತ್ತಡ ತರುತ್ತಿದೆ. ಈ ಹಣ ಕೇಂದ್ರದಿಂದ ಸಕಾಲಕ್ಕೆ ಬಂದರೆ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಸತತವಾಗಿ ಒತ್ತಡ ತಂದರೆ ವರ್ಷಕ್ಕೆ 5 ರಿಂದ 6000 ಕೋಟಿ ರೂ.ಗಳನ್ನಾದರೂ ತುಂಬಿಕೊಡಬಹುದೆಂಬ ನಿರೀಕ್ಷೆಯಿದೆ.
ಹಿಂದೆ ಸರಿದ ಸರ್ಕಾರ:ಕಳೆದ ವರ್ಷ ಸಂಪನ್ಮೂಲ ಸಂಗ್ರಹಕ್ಕಾಗಿ ಪರ್ಯಾಯ ಮೂಲಗಳತ್ತ ಸರ್ಕಾರ ಚಿತ್ತ ಹರಿಸಿತ್ತು. ಮೂಲೆ ನಿವೇಶನ ಹರಾಜು, ಸಿಎ ನಿವೇಶನ ಹರಾಜು, ಸರ್ಕಾರಿ ಜಮೀನು ಮಾರಾಟ, ಅಕ್ರಮ-ಸಕ್ರಮದಂತಹ ಕ್ರಮಗಳಿಗೆ ಮುಂದಾಗಿತ್ತು. ಆದರೆ ಕರೊನಾದಿಂದ ಜನರಲ್ಲಿಯೂ ಹಣದ ಹರಿವು ಇಲ್ಲದ ಕಾರಣ ಯಾವ ಯೋಜನೆಗಳೂ ಪರಿಣಾಮಕಾರಿಯಾಗಿ ಜಾರಿಗೆ ಬರಲಿಲ್ಲ. ಜಮೀನು ಹಾಗೂ ನಿವೇಶನಗಳನ್ನು ಮಾರಾಟ ಮಾಡಿದರೆ ಕಡಿಮೆ ಬೆಲೆಗೆ ಹೋಗುತ್ತವೆ ಎಂಬ ಕಾರಣದಿಂದ ಸರ್ಕಾರ ಹಿಂದೆ ಸರಿಯಿತು.
ಕೇಂದ್ರದಿಂದ ಬರಬೇಕಾಗಿರುವ ಹಣವನ್ನು ತುಂಬಿ ಕೊಡುವಂತೆ ನಿರಂತರ ಒತ್ತಡ ತರುತ್ತಿದ್ದೇವೆ. ಜಿಎಸ್​ಟಿ ಪರಿಹಾರವನ್ನು 2022ರ ನಂತರವೂ ಮುಂದುವರಿಸುವಂತೆ ಮನವಿ ಮಾಡಲು ನಿರ್ಧರಿಸ ಲಾಗಿದೆ. ಕರೊನಾದಿಂದ ಸಮಸ್ಯೆಯಾಗಿರುವ ಕಾರಣ ಪರಿಹಾರ ಮುಂದುವರಿಸುವ ಅನಿವಾರ್ಯತೆ ಇದೆ.
|ಬಸವರಾಜ ಬೊಮ್ಮಾಯಿಗೃಹ ಸಚಿವ
ಲಾಕ್​ಡೌನ್ ಪರಿಣಾಮ ಸಾಕಷ್ಟು ಸಮಸ್ಯೆ ಇದೆ. ಈಗ ಅನ್​ಲಾಕ್ ಆಗಿದ್ದರೂ ಆರ್ಥಿಕ ಚಟುವಟಿಕೆಗಳ ಚೇತರಿಕೆಗೆ ಕಾಲಾವಕಾಶ ಬೇಕಾಗುತ್ತದೆ. ಇದರ ಪರಿಣಾಮ ವರ್ಷದ ಕೊನೆಗೆ ತೆರಿಗೆ ಸಂಗ್ರಹಣೆಯ ಮೇಲೆ ಆಗುತ್ತದೆ. ಜನರಲ್ಲಿ ಸಹ ಹಣದ ಹರಿವು ಇಲ್ಲ.
|ಬಿ.ಟಿ. ಮನೋಹರ್ತೆರಿಗೆ ತಜ್ಞ
ಮಕ್ಕಳನ್ನೇ ಹೆಚ್ಚಾಗಿ ಕಾಡುವ ಮಾರಕ ಮೆಸ್​-ಸಿ; ಪಾಲಕರೇ ಈ ವೈದ್ಯರ ಮಾತನ್ನು ಆಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ..

ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nine =
Remember me
