ವಿಜಯಪುರ:ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ್ನಾಟಕಕ್ಕೆ ಬಂದಿರುವ ಸಂದರ್ಭದಲ್ಲೇ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗುವ ಆಸೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಮಾತ್ರವಲ್ಲ, ನಾನೇನಾದರೂ ಸಿಎಂ ಆಗಿದ್ದಿದ್ದರೆ ಕರ್ನಾಟಕ ನಂಬರ್ ಒನ್ ಮಾಡಿಬಿಡ್ತಿದ್ದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ಇಂಗ್ಲಿಷ್ ಮೋಹ.. ಟ್ರೋಲ್​ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು
ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಇಂದು ಮಾತನಾಡಿದ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ. ಮುಲಾಜಿಲ್ಲದೆ ನಿರ್ಣಯ ತೆಗೆದುಕೊಳ್ಳಬೇಕು. ನಿರ್ಣಯ ಗಟ್ಟಿ ಇರಬೇಕು ಅಲುಗಾಡಬಾರದು‌. ಇಲ್ಲೇ ಜಾಗ ಕೊಡಬೇಕು ಅಂದ್ರೆ ಕೊಡಬೇಕು, ಕಥೆ ಹೇಳುವಂತಿಲ್ಲ. ಅಧಿಕಾರಿಗಳು ಹೇಳ್ತಿರ್ತಿರ್ತಾರೆ. ನೀವು ತಲೆಕೆಡಿಸಿಕೊಳ್ಳಬೇಡಿ, ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?
ಕರ್ನಾಟಕವನ್ನು ಅಲುಗಾಡಿಸುವ ಶಕ್ತಿ ಕೇಂದ್ರ ವಿಜಯಪುರದಲ್ಲಿದೆ. ಮೊದಲು ಹೋಗಿ, ಸರ್ ಸರ್ ಅಂತ ಕೈವೊಡ್ಡಿ ಕೇಳ್ತಿದ್ರು. ಏನೋ ಏಯ್ ನಡಿ ಅಂತಿದ್ರು, ಈಗ ನಾವು ಹೋಗಿ ನಿಂತರೆ, ಬಸನಗೌಡರದಾ? ತಗೊಂಡು ಬಾ ಅಂತ ಬರಾಬರಾ ಅಂತ ಸಹಿ ಮಾಡಿ ಬಿಡ್ತಾರೆ ಎಂದ ಯತ್ನಾಳ್, ಮಂತ್ರಿ ಮಾಡದಿದ್ದರೇನು? ಸಾವಿರಾರು ಕೋಟಿ ರೂಪಾಯಿ ಕೆಲ್ಸ ತಂದಿದ್ದೇನೆ ಎಂದು ಹೇಳಿದ್ದಾರೆ.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
