ಬೆಂಗಳೂರು :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಪಕ್ಷದವರೇ ವಿರೋಧ ಮಾಡಿದರು. ಹೈಕಮಾಂಡ್ ಅದನ್ನು ನಿಯಂತ್ರಣ ಮಾಡಬೇಕಿತ್ತು. ಆದರೆ ಅದು ಮಾಡದೇ ಇದ್ದದ್ದು ಮಠಾಧೀಶರಿಗೆ, ಸಮಾಜಕ್ಕೆ ನೋವಾಗಿದೆ ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಇಂದು ನಡೆಯುತ್ತಿರುವ ಮಠಾಧೀಶರ ಮಹಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತೀವಾದಿಗಳ ಕುತಂತ್ರದಿಂದ ಈ ಕೆಲಸ ನಡೆಯುತ್ತಿದೆ. ಅದಕ್ಕೆ ಮಠಾಧೀಶರ ವಿರೋಧವಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಬದಲಾವಣೆ ಸುದ್ದಿ ಬಂದಾಗ ನಾಡಿನ ಎಲ್ಲ ಸಮಾಜದ ಮಠಾಧಿಪತಿಗಳು ಬದಲಾವಣೆ ಮಾಡಬಾರದು ಎಂಬ ಸಂದೇಶ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಈ ವೇದಿಕೆ ಅಭಿನಂದಿಸುತ್ತದೆ. ಧಾರ್ಮಿಕ ತಾರತಮ್ಯ ಮಾಡದೆ ಎಲ್ಲರಿಗೂ ಅನುದಾನ ನೀಡಿದ್ದಾರೆ. ನಾವು ಯಾವುದೇ ಪಕ್ಷದ ಪರ ಹಾಗೂ ವಿರೋಧವಾಗಿಲ್ಲ. ಈ ಸಮಾವೇಶವನ್ನು ಕೇಂದ್ರ ಸರ್ಕಾರ ಹಾಗೂ ಹೈಕಮಾಂಡ್ ವಿರೋಧವಾಗಿಯೂ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಮಾವೇಶ ಮಠಾಧೀಶರ ಶಕ್ತಿ ಪ್ರದರ್ಶನ ಅಲ್ಲ, ಕೇವಲ ಸಂದೇಶ ಅಷ್ಟೇ. ಯಡಿಯೂರಪ್ಪ ಹಾಗೂ ಅವರ ಮಕ್ಕಳು ಈ ಸಮಾವೇಶ ಆಯೋಜನೆ ಮಾಡಲು ಹೇಳಿಲ್ಲ. ದೇವರ ಸಾಕ್ಷಿಯಾಗಿ ಯಡಿಯೂರಪ್ಪ ಇಂತಹ ಸಮಾವೇಶ ಮಾಡಿ ಎಂದಿಲ್ಲ. ಆ ಪಕ್ಷದ ಯಾವ ವ್ಯಕ್ತಿಗಳೂ ಸೂಚನೆ ಕೊಟ್ಟಿಲ್ಲ. ಯಾವುದೇ ಒತ್ತಡಕ್ಕೆ ಮಾಡಿದ ಸಮಾವೇಶ ಇದಲ್ಲ ಎಂದರು.
ಇದನ್ನೂ ಓದಿ:2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್​ವೈ
ಯಡಿಯೂರಪ್ಪ ಅವರನ್ನು ಈಗ ಮಾತ್ರ ಬೆಂಬಲಿಸಿಲ್ಲ. ಸಿದ್ಧಗಂಗಾ ಸ್ವಾಮೀಜಿ ಕೂಡ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದರು. ಅವರೇ ಮುಂದಾಳತ್ವ ವಹಿಸಿದ್ದರು. ಕರ್ನಾಟಕದ ಎಲ್ಲ ಮಠಾಧೀಶರು ಇದೀಗ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಎಂದರು. ಹಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ತೆರೆದು ಮಠಾಧಿಪತಿಗಳ ಬಗ್ಗೆ ಕೆಲವರು ಮಾತನಾಡುತ್ತಾರೆ.‌ ಇದು ಸರಿಯಲ್ಲ. ‌ಅನ್ಯಾಯ ನಡೆದರೆ ಅದನ್ನು ಪ್ರಶ್ನೆ ಮಾಡುವ ಹಕ್ಕು ನಮಗಿದೆ ಎಂದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಕೆಲವರು ಮಠಾಧಿಪತಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರು ಆತ್ಮ ಅವಲೋಕನ ಮಾಡಿಕೊಳ್ಳಲಿ ಎಂದರು.
ಮೊದಲನೇ ಬಾರಿ ಬಜೆಟ್​​ನಲ್ಲಿ ಮಠಗಳಿಗೆ ಹಣ ಕೊಟ್ಟರು ಸಿಎಂ ಯಡಿಯೂರಪ್ಪ. ಇತರರು ಅವರನ್ನು ಅನುಕರಿಸಿದರು. ಮಠಗಳಿಗೆ ಅನುದಾನ ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಬೆಂಬಲ ಎಂಬ ಆರೋಪ ಇದೆ. ಅನುದಾನ ಪಡೆದವರು ಈ ಸಮಾವೇಶಕ್ಕೆ ಹಲವರು ಬಂದಿಲ್ಲ. ಅನುದಾನಕ್ಕೆ ನಾವು ಕೈಚಾಚಿಲ್ಲ. ಯಡಿಯೂರಪ್ಪ ಒಂದೇ ಜಾತಿಯನ್ನು ಬೆಂಬಲಿಸಿಲ್ಲ, ಅವರ ಜಾತ್ಯಾತೀತ ನಿಲುವಿಗೆ ಮಠಾಧಿಪತಿಗಳ ಬೆಂಬಲ ಹೊರತು, ಅನುದಾನಕ್ಕೆ ಅಲ್ಲ ಎಂದರು. ಕಾಂಗ್ರೆಸ್ನಲ್ಲಿ ವೀರಶೈವ ಲಿಂಗಾಯತ ನಾಯಕರು ಇದ್ದಾಗ ನಮ್ಮ ಸಮುದಾಯ ಬೆಂಬಲ ಕೊಟ್ಟಿತ್ತು. ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ. ಅಲ್ಲಿ ಸಮಾಜ ಇರಬಾರದು. ಇದೀಗ ನಮ್ಮ ಸಮಾಜದ ನಾಯಕ ಅಲ್ಲಿ ಇದ್ದಾನೆ ಎಂಬ ಕಾರಣಕ್ಕಾಗಿ ಬೆಂಬಲ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ:ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..
ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಎನ್ನುತ್ತಾರೆ. ಕಳೆದ ಬಾರಿ ಪ್ರವಾಹ ಬಂದಾಗ ಒಬ್ಬರೇ ಪ್ರವಾಸ ಮಾಡಿ ಸ್ಪಂದಿಸಿದ್ದರು. ಬಿಜೆಪಿಯಲ್ಲಿ ಕೆಲವರು ಪಕ್ಷವನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ನಾಯಕತ್ವ ಬದಲಾವಣೆ ಮಾಡಿದರೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಬಿಜೆಪಿಯಲ್ಲಿ ಗೋವಿಂದ ಕಾರಜೋಳ, ಈಶ್ವರಪ್ಪ, ಬೆಲ್ಲದ್, ಅಶೋಕ್, ಯತ್ನಾಳ್, ಜೋಶಿ ಇದ್ದಾರೆ. ಆದರೆ ಅತ್ಯಂತ ಗೌರವದಿಂದ ಯಡಿಯೂರಪ್ಪ ಅವರನ್ನು ನಡೆಸಿಕೊಳ್ಳಬೇಕು. ಇರುವ ನಾಯಕನಿಗೆ ಗೌರವ ಕೊಡಬೇಕು. ಸರ್ಕಾರ ರಚನೆಗೆ ಯಡಿಯೂರಪ್ಪ ಬೇಕು. ಆದರೆ, ಪೂರ್ಣ ಪ್ರಮಾಣದ ಅಧಿಕಾರ ನಡೆಸಲು ಬಿಡುತ್ತಿಲ್ಲ.‌ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಿಎಸ್​ವೈ ಸ್ಥಾನ ವಹಿಸುವ ಬಗ್ಗೆ ಪ್ರಹ್ಲಾದ್​ ಜೋಶಿ ಹೇಳಿದ್ದೇನು?

ನಡುರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಸಿಕ್ಕಿಬಿದ್ದ ಯುವಕ; ಮುಂದಾದದ್ದು ಭಾರಿ ದುರಂತ

ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
