ಉಡುಪಿ:ಕರ್ನಾಟಕದ ಬಿಜೆಪಿ ಸರ್ಕಾರ ತಾವು ಆರಿಸಿದ ಸರ್ಕಾರವಲ್ಲ, ಹಣದಿಂದ ಹಾಗೂ ಕಳ್ಳತನದಿಂದ ಅಧಿಕಾರ ಹಿಡಿದಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಇಂದು ಮಾತನಾಡಿದ ರಾಹುಲ್​ ಗಾಂಧಿ, ಬಡವರು ಹಾಗೂ ದುರ್ಬಲರಿಗೆ ಸಹಾಯ ಮಾಡುವುದು ಕಾಂಗ್ರೆಸ್‌ ಪಕ್ಷದ ಉದ್ದೇಶವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವನ್ನು ಜನರು ಆಯ್ಕೆ ಮಾಡಿಲ್ಲ. ಈ ಸರ್ಕಾರ ಹಣದಿಂದ ಹಾಗೂ ಕಳ್ಳ ಮಾರ್ಗದಿಂದ ರಚಿಸಲಾಗಿದೆ. ಶಾಸಕರ ಖರೀದಿ ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲ ಮಾಡಲಾಯಿತು. 2500 ಕೋಟಿ ರೂಪಾಯಿಗೆ ಸಿಎಂ ಸೀಟು ಬಿಕರಿ ಇದೆ ಎಂದು ಅವರ ಪಕ್ಷದ ಶಾಸಕರೇ ಹೇಳಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ:ಜೇವೂರ ಅಂಗನವಾಡಿ ಅವಾಂತರ: ಕೊಳೆತ ಮೊಟ್ಟೆಗಳ ವಿತರಣೆ, ಮಕ್ಕಳ ಜೀವದ ಜತೆ ಚೆಲ್ಲಾಟ
ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ. ಬಿಜೆಪಿ ಹಣದಿಂದ ಹಾಗೂ ಕಳ್ಳತನದಿಂದ ಅಧಿಕಾರ ಹಿಡಿದಿದೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ದಿಂಗಾಲೇಶ್ವರ ಸ್ವಾಮೀಜಿ ‌ಕೂಡ ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. ಧಾರ್ಮಿಕ ವ್ಯಕ್ತಿ ಎಂಬ ಕಾರಣಕ್ಕೆ ಅವರಿಂದ 30 ಪರ್ಸೆಂಟ್ ಕಮಿಷನ್​ ಪಡೆಯಲಾಗಿದೆ. ಪ್ರತಿ ನೇಮಕಾತಿಯಲ್ಲೂ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆದಿದೆ. ಇದು ನಿಮ್ಮ ಕಿಸೆಯಿಂದ ತೆಗೆದ ಹಣ, ಆದರೆ ಅದು ಎಲ್ಲಿಗೆ ಹೋಗುತ್ತಿದೆ? ಎಂದು ರಾಹುಲ್​ ಪ್ರಶ್ನೆ ಮಾಡಿದರು.
ಜನರ ಹಣ ಜನರ ಶಿಕ್ಷಣ, ಆಸ್ಪತ್ರೆಗೆ ಹೋಗುತ್ತಿದೆಯಾ ಆಲೋಚಿಸಿ. ಬಡವರಿಗಾಗಲಿ, ಮೀನುಗಾರರು ಹಾಗೂ ಕಾರ್ಮಿಕರಿಗಾಗಲಿ ತೆರಿಗೆ ಹಣ ಹೋಗುತ್ತಿಲ್ಲ. ನಿಮ್ಮ ಶಿಕ್ಷಣ ಮತ್ತು ಆರೋಗ್ಯ ಯಾವುದಕ್ಕೂ ಈ ಹಣ ವಿನಿಯೋಗ ಆಗುತ್ತಿಲ್ಲ. ಬಡವರಿಗಂತೂ ಇವರ ಹಣದಿಂದ ಪ್ರಯೋಜನವಾಗಿಲ್ಲ. ಒಂದು ಕಡೆ ಭ್ರಷ್ಟಾಚಾರ ಮಿತಿ ಮೀರಿದೆ ಮತ್ತು ಬೆಲೆ ಏರಿಕೆ ಆಗಿದೆ. ಸರ್ಕಾರ ಡೀಸೆಲ್ ಹಾಗೂ ಪೆಟ್ರೋಲ್​ನಿಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸಿದೆ ಎಂದು ಹೇಳಿದರು.
ಬಡ ಜನರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆದರೆ, ಶ್ರೀಮಂತರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಹೀಗಾಗಿ ಕಾಂಗ್ರೆಸ್ ನಾಲ್ಕು ಗ್ಯಾರೆಂಟಿ ಸ್ಕೀಮ್ ಅನ್ನು ಜಾರಿಗೆ ತರಲಿದೆ. ಈ ಭರವಸೆ ಈಡೇರಿಕೆಗೆ ನಾವು ನಾಲ್ಕೈದು ವರ್ಷ ಕಾಯುವುದಿಲ್ಲ. ನಮ್ಮ ಸರ್ಕಾರ ಬಂದರೆ, ಒಂದೇ ಗಂಟೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಮೊದಲ ಕ್ಯಾಬಿನೆಟ್​ನಲ್ಲೇ ನಮ್ಮ ಭರವಸೆ ಈಡೇರಿಸುತ್ತೇವೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ!; ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಟ್ರಸ್ಟ್ ನಿಂದ ಎಚ್ಚರಿಕೆ
ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತರುತ್ತೇವೆ. ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿ ಅಕೌಂಟ್ ಸೇರಲಿದೆ. ಪ್ರಳಯವಾದರೂ ಪ್ರತಿ ತಿಂಗಳು ಮಹಿಳೆಯರ ಅಕೌಂಟಿಗೆ ಹಣ ಹೋಗುತ್ತದೆ. ಇದರೊಂದಿಗೆ ಮನೆ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಮತ್ತು ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುತ್ತೇವೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3000 ರೂ. ನೀಡಲಾಗುವುದು. ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ರೂಪಾಯಿ ನೀಡಲಾಗುತ್ತದೆ. ಈ 4 ಸ್ಕೀಮ್ ಮೊದಲನೇ ಕ್ಯಾಬಿನೆಟ್​ನಲ್ಲೇ ನಿರ್ಣಯವಾಗುತ್ತದೆ. ಈಗಾಗಲೇ ಛತ್ತೀಸ್​ಗಢ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡುತ್ತೇವೆ. ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಎಂದು ವಾಗ್ದಾನ ಮಾಡಿದರು.
ಪ್ರಧಾನಿ ಮೋದಿ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಅಂದಿದ್ದರು. ಅವರ ತರ ನಾವು ಸುಳ್ಳು ಭರವಸೆ ಕೊಡಲ್ಲ ಎಂದು ಬಿಜೆಪಿಗೆ ರಾಹುಲ್​ ತಿರುಗೇಟು ನೀಡಿದರು.(ದಿಗ್ವಿಜಯ ನ್ಯೂಸ್​)
AIADMK ಅಭ್ಯರ್ಥಿಯಿಂದ ನಕಲಿ ಎ ಫಾರ್ಮ್, ಬಿ ಫಾರ್ಮ್ ಸಲ್ಲಿಕೆ; ಬೆಂಗಳೂರಲ್ಲಿ ಎಫ್ಐಆರ್ ದಾಖಲು

ಕುಡಿಯುವುದಕ್ಕೆ ಹಣ ಕೊಡಲು ನಿರಾಕರಣೆ; ಇಟ್ಟಿಗೆಯಿಂದ ತಂದೆಯನ್ನು ಹತ್ಯೆ ಮಾಡಿದ ಮಗ

ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಬಿಜೆಪಿಯಿಂದ ಸಾಧ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 9 =
Remember me
