ತುಮಕೂರು:‘‘ಮಾಜಿ ಸಿಎಂ ಸಿದ್ದರಾಮಯ್ಯನವರೇ ಬಂದು ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಸಂತೋಷಪಡುತ್ತೇನೆ. ದೇವೇಗೌಡರು ಬಂದು ತುಮಕೂರಿನಲ್ಲಿ ಕಣಕ್ಕಿಳಿದಿದ್ದರು… ಏನಾಯ್ತು ಅಂತಾ ಎಲ್ಲರಿಗೂ ಗೊತ್ತು…’’ ಎಂದು ಸಚಿವ ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
‘ದೇವೇಗೌಡರನ್ನು ಸೋಲಿಸಿದಂತೆ ಸಿದ್ದರಾಮಯ್ಯರನ್ನು ಕೂಡ ಸೋಲಿಸ್ತಿವಿ’ ಎಂದು ಪರೋಕ್ಷವಾಗಿ ಮಾಧುಸ್ವಾಮಿ ಹೇಳಿದರು. ‘‘ಸುಮಾರು ಇಪ್ಪತ್ತು, ಮೂವತ್ತು ವರ್ಷದಿಂದ ರಾಜಕಾರಣ ಮಾಡಿದ್ದೇವೆ. ಯಾರೋ ಇಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾವು ಸುಮ್ಮನೆ ಇರಲು ಸಾಧ್ಯವೇ? ನಾವಂತೂ ಚುನಾವಣೆಗೆ ನಿಲ್ಲಲೇಬೇಕು, ನಿಲ್ಲುತ್ತೇವೆ. ಹೊರಗಿನಿಂದ ಯಾರು ಬರ್ತಾರೋ ಯಾರಿಗೆ ಗೊತ್ತು? ಸಿದ್ದರಾಮಯ್ಯನವರನ್ನು ಬರಬೇಡಿ ಎನ್ನಲಾಗುತ್ತದೆಯೇ?
ದೇವೇಗೌಡರನ್ನು ಕೂಡ ನಾವು ಬರಬೇಡಿ ಅಂತ ಹೇಳಿರಲಿಲ್ಲವಲ್ಲ?’’ ಎಂದು ಹೇಳಿದರು.
‘‘ಕಾಂಗ್ರೆಸ್ ಸೇರುವಂತೆ ನನ್ನನ್ನು ಯಾರೂ ಕರೆದಿಲ್ಲ. ಕಾಂಗ್ರೆಸ್ ಸೇರುವ ಪರಿಸ್ಥಿತಿಯೂ ನನಗೆ ಬಂದಿಲ್ಲ. ಈಗ ಆ ಪ್ರಶ್ನೆ ಉದ್ಭವಿಸುದೇ ಇಲ್ಲ’’ ಎಂದು ಸ್ಪಷ್ಟಪಡಿಸಿದರು.
ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿಲ್ಲ: ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

ಕಿರಣ್​ಗೆ ಡಿವೋರ್ಸ್ ನೀಡಿದ ಅಮೀರ್​ಗೆ ಫಾತೀಮಾ 3ನೇ ಹೆಂಡತಿ!? ಟ್ರೆಂಡಿಂಗ್​ನಲ್ಲಿ ದಂಗಲ್ ನಟಿ

ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

Sign in to your account
Please enter an answer in digits:six − 5 =
Remember me
