ತುಮಕೂರು: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಅಂತ್ಯಸಂಸ್ಕಾರ ಮಾಡಿರುವ ವಿಡಿಯೋ ವೈರಲ್​ ಆಗಿದೆ.
ಕುಣಿಗಲ್ ತಾಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲೇ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಮೃತರ ಗಂಟಲು ದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.ಇದನ್ನೂ ಓದಿರಿvideo/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!
ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಯು ವೃದ್ಧನ ಶವವನ್ನು ಪ್ಲಾಸ್ಟಿಕ್​ ಚೀಲಗಳಿಂದ ಮೃತದೇಹವನ್ನು ಪ್ಯಾಕ್ ಮಾಡಿದರು. ಯಾವುದೇ ಅಂತಿಮ ವಿಧಿವಿಧಾನವಿಲ್ಲದೆ ಅಂತ್ಯಸಂಸ್ಕಾರ‌ ನೆರವೇರಿತು. ಸಂಬಂಧಿಕರು ಸ್ವಲ್ಪ ದೂರದಲ್ಲೇ ನಿಂತಿದ್ದರು. ಕೆಲವರು ಶವದ ಬಳಿಯೂ ಬಂದು ಹೋದರು.
ಒಟ್ಟಿನಲ್ಲಿ ಕೋವಿಡ್​ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೃತರ ಅಂತ್ಯಸಂಸ್ಕಾರದ ರೀತಿ-ನೀತಿಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 9 ಶವಗಳನ್ನು ಎಸೆದು ಮಣ್ಣು ಮಾಡಿದ್ದು, ಯಾದಗಿರಿಯಲ್ಲೂ ಶವವೊಂದನ್ನು ದರದರನೆ ಎಳೆತಂದು ಗುಂಡಿಗೆ ಬಿಸಾಕಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.
ಪ್ರಾಣಿಗಿಂತ ಕಡೆಯಾಗಿ ಕರೊನಾ ಸೋಂಕಿತರ ಶವಸಂಸ್ಕಾರ ನಡೆಯುತ್ತಿರುವುದನ್ನ ಕಂಡ ಜನತೆ ಆತಂಕಗೊಂಡಿದ್ದಾರೆ. ಈಗ ಇಂತಹದ್ದೇ ಸಾಲಿಗೆ ತಿಮ್ಮೇಗೌಡನ ಪಾಳ್ಯದ ವೃದ್ಧನ ಶವಸಂಸ್ಕಾರವೂ ಸೇರಿದೆ. ಚೀಲಗಳಿಂದ ಶವ ಮುಚ್ಚಿದ ಪರಿ ಕಂಡು ಕುಟುಂಬಸ್ಥರಾದಿಯಾಗಿ, ಸ್ಥಳೀಯರೂ ಮರುಕಪಟ್ಟಿದ್ದಾರೆ.
https://www.facebook.com/VVani4U/videos/1204935733187209/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + sixteen =
Remember me
